ಉದಯವಾಹಿನಿ,ಕೋಲಾರ : ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟವನ್ನು ವಿಭಜಿಸಲು ಸರ್ಕಾರದ ಅದೇಶ ಸಿಕ್ಕಿದೆ. ಒಕ್ಕೂಟದ ಆಡಳಿತ ಮಂಡಳಿಯ ಚುನಾವಣೆಯನ್ನು ನಡೆಸ ಬೇಕೆಂಬ ದೆಸೆಯಲ್ಲಿ ಒಕ್ಕೂಟದ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ವಿಭಜಿನೆಯಾಗುವ ಮೂಲಕ ಪ್ರತ್ಯೇಕವಾಗಲಿದೆ. ಈಗಾಗಲೇ ಕೋಚಿಮುಲ್‌ಗೆ ಆಡಳಿತಾಧಿಕಾರಿಗಳನ್ನು ನಿಯೋಜಿಸಿದ್ದು ಸರ್ಕಾರದಿಂದ ನೇಮಕಾತಿಯ ಅಧಿಕೃತ ಆದೇಶವು ಶೀಘ್ರದಲ್ಲೇ ಹೊರ ಬೀಳಲಿದೆ.
ಒಕ್ಕೂಟದ ಆಡಳಿತಾ ಮಂಡಳಿ ಅಧಿಕಾರದ ಅವಧಿ ಮುಗಿದು ಹಲವಾರು ತಿಂಗಳುಗಳೇ ಕಳೆದಿದ್ದರೂ ಸಹ ಚುನಾವಣೆಯು ಅಧಿಕೃತವಾಗಿ ಘೋಷಣೆಯಾಗದ ಹಿನ್ನಲೆಯಲ್ಲಿ ಆಡಳಿತ ಮಂಡಲಿ ಯಾಥಾಸ್ಥಿತಿಯಲ್ಲಿ ಮುಂದುವರೆದಿತ್ತು ಈಗಾ ಒಕ್ಕೂಟದ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲು ಸರ್ಕಾರವು ನಿರ್ದರಿಸಿದೆ,
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಒಕ್ಕೂಟವನ್ನು ವಿಭಜಿಸಿದ ನಂತರ ಎರಡು ಜಿಲ್ಲೆಗೆ ಪ್ರತ್ಯೇಕ ಆಡಳಿತಾಧಿಕಾರಿಗಳನ್ನು ಸರ್ಕಾರವು ನೇಮಿಸಲಿದೆ. ನೇಮಕಾತಿಯ ನಂತರ ಎರಡು ಜಿಲ್ಲೆಗಳ ಹಾಲು ಒಕ್ಕೂಟಕ್ಕೆ ಚುನಾವಣೆಗಳನ್ನು ನಡೆಸುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.
ಈ ಹಿಂದೆ ಬಿಜೆಪಿ ಸರ್ಕಾರವು ಕಳೆದ ೧೦ ವರ್ಷಗಳ ಹಿಂದೆಯೇ ಕೋಚಿಮುಲ್ ಒಕ್ಕೂಟದಿಂದ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ವಿಭಜನೆ ಮಾಡಲು ಆದೇಶಿಸಲಾಗಿತ್ತು. ಆಡಳಿತಾಧಿಕಾರಿಗಳು ನೇಮಕವಾಗಿ ೫-೬ ತಿಂಗಳು ಆಡಳಿತ ನಡೆಸಿದರು, ಆಗಾ ಆಡಳಿತ ಮಂಡಳಿಯ ಕೆಲವು ಸದಸ್ಯರು ವಿಭಜನೆಗೆ ಅಕ್ಷೇಪ ವ್ಯಕ್ತ ಪಡೆಸಿದ್ದರು. ಶೀಘ್ರವೇ ಆಡಳಿತ ಮಂಡಳಿಗೆ ಚುನಾವಣೆ ನಡೆಸ ಬೇಕೆಂದು ಒತ್ತಾಯಿಸಿ ಕೆಲವು ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು.
