ಉದಯವಾಹಿನಿ,ಬೆಂಗಳೂರು: ಬಾಡಿಗೆ ಮನೆ ನೋಡುವ ನೆಪದಲ್ಲಿ ಮನೆಗೆ ನುಗ್ಗಿದ ಮಹಿಳೆ ಮನೆ ಒಡತಿ ಮೇಲೆ ಹಲ್ಲೆಗೈದು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಂದಿನಿ ಲೇ ಔಟ್ನಲ್ಲಿ ನಡೆದಿದೆ.ಲಗ್ಗೆರೆಯ ಪಾರ್ವತಿ ನಗರದಲ್ಲಿ, ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದಿದ್ದ ಮಹಿಳೆ ಈ ವೇಳೆ ಮನೆಯನ್ನು ತೋರಿಸುವಂತೆ ಹೇಳಿದ್ದಾಳೆ.
ಆಗ ಮನೆ ಒಡತಿ ಶಾಂತಮ್ಮ ಮನೆ ತೋರಿಸಲು ಮುಂದಾಗಿದ್ದಾರೆ. ಮನೆ ಒಳಗೆ ಹೋಗಿದ್ದ ವೇಳೆ ಮನೆ ನೋಡಲು ಬಂದಿರುವ ಮಹಿಳೆ ಕಟ್ಟಿಗೆ ಪೀಸ್ನಿಂದ ಮನೆ ಮಾಲೀಕಿ ಶಾಂತಮ್ಮ ತಲೆಗೆ ಹೊಡೆದಿದ್ದಾಳೆ. ಮಹಿಳೆ ರಕ್ತಸಿಕ್ತವಾಗಿ ಬೀಳುತ್ತಿದ್ದಂತೆ, ಮಹಿಳೆಯ ಕತ್ತಿನಲ್ಲಿದ್ದ ಚಿನ್ನಾಭರಣ ಕಸಿದು ಪರಾರಿಯಾಗಿದ್ದಾಳೆ.ಸದ್ಯ ಗಾಯಗೊಂಡ ಶಾಂತಮ್ಮಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ. ಸ್ಥಳಕ್ಕೆ ದೌಡಾಯಿಸಿರೋ ನಂದಿನಿ ಲೇ ಔಟ್ ಪೊಲೀಸರು, ಸದ್ಯ ಅಕ್ಕಪಕ್ಕದ ಮನೆಯವರಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ. ಸದ್ಯ ಹಲ್ಲೆ ಮಾಡಿ ಚೈನ್ ಕಸಿದು ಪರಾರಿಯಾದ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.ಹಲವು ದಿನಗಳಿಂದ ಮನೆ ಬಾಡಿಗೆ ಕೇಳೋ ನೆಪದಲ್ಲಿ ಬರ್ತಿದ್ದ ಮಹಿಳೆ, ಒಂಟಿಯಾಗಿಯೇ ಬಂದು ಮನೆ ಬಾಡಿಗೆಗೆ ಇದೆಯಾ ಅಂತ ಕೇಳುತ್ತಿದ್ದಳು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
