ಉದಯವಾಹಿನಿ, ಹನೂರು: ತಾಲ್ಲೂಕಿನ ಮಾರ್ಟಳ್ಳಿಯಲ್ಲಿ ಶನಿವಾರ ಕ್ರೈಸ್ತ ಸಮುದಾಯದವರು ತಮ್ಮ ಪೂರ್ವಿಕರ ಸಮಾಧಿಗಳಿಗೆ ಮೇಣದ ಬತ್ತಿ ಮತ್ತು ಹೂಗುಚ್ಚವನ್ನಿಡುವ ಮೂಲಕ ಸ್ಮಶಾನ ಪೂಜಾ ದಿನ ಆಚರಿಸಿದರು.ಪ್ರತಿ ವರ್ಷ ನ.2 ರಂದು ಆಚರಿಸಲಾಗುವ ಸ್ಮಶಾನ ಪೂಜಾ ದಿನಾಚರಣೆಗೆ ಕಳೆದವಾರದಿಂದಲೇ ಸಿದ್ದತೆ ನಡೆದಿತ್ತು. ಸ್ಮಶಾನದಲ್ಲಿ ತಮ್ಮ ಪೂರ್ವಿಕರ ಸಮಾಧಿಗಳಿಗೆ ಬಣ್ಣ ತುಂಬಿ ಸಿಂಗರಿಸಿದ್ದರು.
ಪಾದ್ರಿಗಳು ಪ್ರತಿ ಸಮಾಧಿಗೂ ಪೂಜೆ ಸಲ್ಲಿಸಿದರು.ಸ್ಮಶಾನದಲ್ಲಿ ಜನರು ವಿವಿಧ ಅಲಂಕಾರಗೊಂಡಿದ್ದ ಪೂರ್ವಿಕರ ಸಮಾಧಿಗಳಿಗೆ ಮೇಣದ ಬತ್ತಿ ಹಚ್ಚಿಡುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.
ಫಾ. ಸಂತಿಯಾಗು ದಿವ್ಯಬಲಿಪೂಜೆ ನೆರವೇರಿಸಿದರು,ಧರ್ಮ ಕೇಂದ್ರದ ಗುರುಗಳಾದ ಫಾ ಕ್ರಿಸ್ಟೋಫರ್ ಸಗಾಯರಾಜ್ ಇನ್ನಿತರ ಗುರುಗಳು ಮತ್ತು ಸಾವಿರಾರು ಜನರು ಉಪಸ್ಥಿತರಿದ್ದರು.
