ಉದಯವಾಹಿನಿ , ಸರಳ ಜೀವನಶೈಲಿಯ ಜೊತೆಗೆ ಅತ್ಯುತ್ತಮ ಶಿಸ್ತಿಗೆ ಹೆಸರುವಾಸಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಆಹಾರ ಕ್ರಮದಲ್ಲೂ ಸರಳತೆಯನ್ನು ಪಾಲಿಸುತ್ತಾರೆ. ಮೋದಿಯವರು ಭೂರಿ ಭಕ್ಷ್ಯಗಳನ್ನು ಇಷ್ಟಪಡುವುದಿಲ್ಲ. ದೇಹದ ಆರೋಗ್ಯದ ಜೊತೆಗೆ ಮನಸ್ಸಿಗೆ ನೆಮ್ಮದಿ ನೀಡುವಂತಹ ಆಹಾರವನ್ನೇ ಅವರು ಹೆಚ್ಚು ಸೇವನೆ ಮಾಡುತ್ತಾರೆ. ಅದರಲ್ಲಿ ಖಿಚಡಿ ಕೂಡ ಒಂದಾಗಿದೆ.
ನರೇಂದ್ರ ಮೋದಿ ಪ್ಲೇಟ್ನಲ್ಲಿ ಖಿಚಡಿ ರೆಸಿಪಿ ಇದ್ದೇ ಇರುತ್ತದೆ. ಮೋದಿ ಅವರಿಗೆ ತುಂಬಾ ಇಷ್ಟವಾಗುವಂತಹ ಖಿಚಡಿಯು ರುಚಿಕರವಾಗಿರುವುದಲ್ಲದೆ ಪೌಷ್ಟಿಕಾಂಶಗಳನ್ನು ಸಹ ಒಳಗೊಂಡಿದೆ. ಖಿಚಡಿಯು ಅತ್ಯಂತ ಸುಲಭವಾಗಿ ಜೀರ್ಣವಾಗುವ ಆಹಾರವಾಗಿದೆ. ಮೋದಿ ಅವರ ನೆಚ್ಚಿನ ಖಿಚಡಿಯನ್ನು ಮನೆಯಲ್ಲಿಯೇ ತುಂಬಾ ಸರಳವಾಗಿ ತಯಾರಿಸಬಹುದು. ಅಡುಗೆ ಮಾಡಲು ತುಂಬಾ ಕಡಿಮೆ ಸಮಯವನ್ನು ಹೊಂದಿರುವವರೂ ಪ್ರಧಾನಿ ನರೇಂದ್ರ ಮೋದಿಯವರ ಫೇವರಿಟ್ ಖಿಚಡಿ ರೆಸಿಪಿಯನ್ನು ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಬಹುದು. ಅಕ್ಕಿ, ಬೇಳೆಕಾಳುಗಳು, ಕೆಲವು ತರಕಾರಿಗಳು, ಲಘು ಮಸಾಲೆಗಳಿಂದ ತಯಾರಾಗುವ ಈ ಖಿಚಡಿ ಸಖತ್ ಟೇಸ್ಟಿಯಾಗಿರುವ ಜೊತೆಗೆ ಆರೋಗ್ಯಕ್ಕೂ ಉತ್ತಮವಾಗಿದೆ. ಇದೀಗ ಪ್ರಧಾನಿ ಮೋದಿ ಅವರ ನೆಚ್ಚಿನ ಖಿಚಡಿ ರೆಸಿಪಿಯನ್ನು ತುಂಬಾ ಸುಲಭವಾಗಿ ತಯಾರಿಸುವುದು ಹೇಗೆ ಎಂಬುದನ್ನು ವಿವರವಾಗಿ ಇಲ್ಲಿ ತಿಳಿಯೋಣ.
ಹೆಸರುಬೇಳೆ, ತೊಗರಿಬೇಳೆ – ಅರ್ಧ ಕಪ್ (ಯಾವುದಾದರು ಒಂದು ಬೇಳೆ ಇಲ್ಲವೇ ಎರಡನ್ನು ಬಳಸಬಹುದು)
ಅಕ್ಕಿ – ಅರ್ಧ ಕಪ್
ಸಣ್ಣಗೆ ಕತ್ತರಿಸಿದ ಈರುಳ್ಳಿ – ಒಂದು
ಸಣ್ಣಗೆ ಕಟ್ ಮಾಡಿದ ಶುಂಠಿ – ಒಂದು ಇಂಚಿನಷ್ಟು
ಟೊಮೆಟೊ – ಒಂದು
ಹಸಿ ಮೆಣಸಿನಕಾಯಿ – ಒಂದು
ಜೀರಿಗೆ – ಒಂದು ಚಮಚ
ಅರಿಶಿನ ಪುಡಿ – ಅರ್ಧ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಇಂಗು – ಒಂದು ಚಿಟಿಕೆ
ತುಪ್ಪ ಇಲ್ಲವೇ ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
ನೀರು – ಅಗತ್ಯಕ್ಕೆ ತಕ್ಕಂತೆ ಬಳಸಿ
