ಉದಯವಾಹಿನಿ, ಬೆಂಗಳೂರು: ಸಾಲು ಸಾಲು ರಜೆ ಮುಗಿಸಿಕೊಂಡು ನಗರಕ್ಕೆ ಹಿಂದಿರುಗುತ್ತಿದ್ದ ಜನರು ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡುತ್ತಿದ್ದ ದೃಶ್ಯಗಳು ನಗರಕ್ಕೆ ಪ್ರವೇಶಿಸುವ ಪ್ರಮುಖ ಮುಖ್ಯರಸ್ತೆಯಲ್ಲಿಂದು ಕಂಡು ಬಂದವು. ದೀಪಾವಳಿ, ಕನ್ನಡರಾಜ್ಯೋತ್ಸವ, ವಾರಾಂತ್ಯದ ರಜೆ ಹೀಗೆ ನಾಲ್ಕು ದಿನ ಸಾಲು ಸಾಲು ರಜೆ ಬಂದ ಹಿನ್ನೆಲೆಯಲ್ಲಿ ನಗರ ನಿವಾಸಿಗಳು ತಮ ತಮ ಊರು, ಪ್ರವಾಸಿ ತಾಣಗಳಿಗೆ ತರಳಿ ಎಂಜಾಯ್ ಮಾಡಿಕೊಂಡು ರಿಲ್ಯಾಕ್‌್ಸ ಮೂಡ್‌ನಲ್ಲಿ ನಗರಕ್ಕೆ ಪ್ರಯಾಣಿಸಿದ್ದು, ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಗಂಟೆಗಟ್ಟಲೆ ಪರದಾಡಿದರು.
ಸುಮಾರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ತುಮಕೂರು ರಸ್ತೆಯಲ್ಲಂತೂ ಎಲ್ಲಿ ನೋಡಿದರೂ ವಾಹನಗಳ ಸಾಲು ಕಂಡು ಬಂದವು. ಬಹುತೇಕ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ನೆಲಮಂಗಲದ ಬಳಿ ರಸ್ತೆಗಳು ಸಂಗಮವಾಗುತ್ತವೆ . ಅಲ್ಲಿಂದ ಪ್ರಾರಂಭವಾದ ಟ್ರಾಫಿಕ್ ಎಂಟನೇ ಮೈಲಿ, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ, ಗೊರಗುಂಟೆಪಾಳ್ಯ, ಯಶವಂತಪುರದಲ್ಲೂಂತೂ ಕಿಕ್ಕಿರಿದು ವಾಹನಗಳು ಒಮೆಲೆ ಬಂದಿದ್ದರಿಂದ ಕಿಲೋಮಿಟರ್‌ಗಟ್ಟಲೆ ಜಾಮ್ ಉಂಟಾಗಿ ನಿಂತಲ್ಲೇ ನಿಂತು ಸವಾರರು ಹಾಗೂ ಪ್ರಯಾಣಿಕರು ಹೈರಾಣಾರಾಗಿಬಿಟ್ಟಿದ್ದಾರೆ.
ಜನರು ವಾಪಸಾಗುತ್ತಿದ್ದು, ರಾತ್ರಿಯಿಡಿ ವಾಹನ ಸಂಚಾರ ಮಾಮೂಲಿನಂತಿತ್ತು. ಪೊಲೀಸರಂತೂ ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ಸುಸ್ತು ಹೊಡೆದು ಹೋಗಿಬಿಟ್ಟಿದ್ದಾರೆ. ಅದೇ ರೀತಿ ಮೈಸೂರು ರಸ್ತೆಯಲ್ಲೂ ಸಹ ಇದೆ ವಾತಾವರಣ ಮುಂದು ವರೆದಿತ್ತು. ಇಲ್ಲಿ ಹೆಚ್ಚಾಗಿ ಕಾರುಗಳ ಸಾಲೇ ಕಂಡುಬಂದವು. ಮೈಸೂರು, ಕೊಡಗು, ಊಟಿ ಕಡೆ ಪ್ರವಾಸಕ್ಕೆ ತೆರಳಿದ್ದ ಜನರು ನಗರಕ್ಕೆ ವಾಪಸಾಗುತ್ತಿದ್ದು, ಎಕ್‌್ಸಪ್ರೆಸ್‌ವೇನಲ್ಲಿ ವೇಗವಾಗಿ ಬಂದ ವಾಹನಗಳಿಗೆ ನಗರದ ಪ್ರವೇಶ ದ್ವಾರ ಬಿಡದಿ ಬಳಿಯೇ ಸ್ಪೀಡ್‌ಗೆ ಬ್ರೇಕ್ ಹಾಕಿದಂತಾಯಿತು. ಅಷ್ಟರಮಟ್ಟಿಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
