ಉದಯವಾಹಿನಿ, ಬಳ್ಳಾರಿ : “ಕುಲ ಕುಲ ಎಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ” ಎಂದು ನಾಡಿನಲ್ಲಿದ್ದ ಜಾತಿ ಜಾತಿಗಳ ನಡುವಿನ ಕಲ ಮಾತ್ಸರ್ಯದ ಬಗ್ಗೆ ಜನತೆಗೆ ಅರುಹಿದ್ದ ಭಕ್ತ ಕನಕದಾಸರ 537 ನೇ ಜಯಂತೋತ್ಸವವನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಕುರುಬ ಸಂಘದಿದ್ದ ಭಕ್ತಿಭಾವದ, ಆಕರ್ಷಕ ಮೆರವಣಿಗೆ ಮೂಲಕ ಆಚರಿಸಲಾಯ್ತು.

ನಗರದ ಅಗ್ನಿ ಶಾಮಕ ಠಾಣೆಯ ಮುಂಭಾಗದಲ್ಲಿನ ಕನಕದಾಸರ ಪ್ರತಿಮೆ ಬಳಿಯಿಂದ ಕನಕದಾಸರ ಭಾವಚಿತ್ರ ಮೆರವಣಿಗೆ ಆರಂಭಗೊಂಡಿತು. ಅಲ್ಲಿಂದ ಆರಂಭಗೊಂಡ ಮೆರವಣಿಗೆ ವಾಲ್ಮೀಕಿ ಸರ್ಕಲ್, ದುರ್ಗಮ್ಮ ದೇವಸ್ಥಾನ, ಗಡಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್ ಪೇಟೆ, ತೇರು ಬೀದಿ, ಗವಿಯಪ್ಪ ವೃತ್ತದ ಮೂಲಕ ದೊಡ್ಡನಗೌಡ ರಂಗ ಮಂದಿರಕ್ಕೆ ಆಗಮಿಸಿತು.
ಮೆರವಣಿಯು ಡೊಳ್ಳು ಮೊದಲಾದ ಜನಪದ ವಾದ್ಯಗಳ ಮೂಲಕ ಸಾಗಿ ಬಂತು. ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಾ.ಪಿ.ಎಲ್.ಗಾದಿಲಿಂಗನಗೌಡ, ಪ್ರಧಾನ ಕಾರ್ಯದರ್ಶಿ ಅಲ್ಲಿಪುರದ ಕೆ.ಮೋಹನ್, ಮಾಜಿ ಮೇಯರ್ ಬೆಣಕಲ್ ಬಸವರಾಜಗೌಡ, ಬಳ್ಳಾರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ.ಕೆ.ಕೆರಕೋಡಪ್ಪ ಮೊದಲಾದವರು ಪಾಲ್ಗೊಂಡಿದ್ದರು.
ನಂತರ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಜರುಗಿತ್ತು.

Leave a Reply

Your email address will not be published. Required fields are marked *

error: Content is protected !!