ಉದಯವಾಹಿನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಅವರ ಸಂಸದೆ ಸಹೋದರಿ ಪ್ರಿಯಾಂಕಾ ಗಾಂಧಿ ಸೇರಿದಂತೆ ವಿರೋಧ ಪಕ್ಷದ ಸಂಸದರು ‘ಮೋದಿ – ಅದಾನಿ ಏಕ್ ಹೈ’ ಎಂದು ಬರೆಯಲಾಗಿದ್ದ ಕಪ್ಪು ಬಣ್ಣದ ಜಾಕೆಟ್‌ಗಳನ್ನು ಧರಿಸಿ ಗುರುವಾರ ಸಂಸತ್ತಿನ ಸಂಕೀರ್ಣದಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ ‘ಮೋದಿಯವರು ಅದಾನಿ ಅವರನ್ನು ತನಿಖೆ ಮಾಡಲು ಸಾಧ್ಯವಿಲ್ಲ ಏಕೆಂದರೆ ಅವರು ಹಾಗೆ ಮಾಡಿದರೆ, ಅವರು ಸ್ವತಃ ತನಿಖೆಗೆ ಒಳಗಾಗುತ್ತಾರೆ. ಮೋದಿ ಔರ್ ಅದಾನಿ ಏಕ್ ಹೈ. ದೋ ನಹೀ ಹೈ, ಏಕ್ ಹೈ,” ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಹೇಳಿದರು. ಕಾಂಗ್ರೆಸ್, ಎಎಪಿ, ಆರ್‌ಜೆಡಿ, ಶಿವಸೇನೆ (ಯುಬಿಟಿ), ಡಿಎಂಕೆ ಮತ್ತು ಎಡಪಕ್ಷಗಳ ಸಂಸದರು ತಮ್ಮ ಬೇಡಿಕೆಯ ಪರವಾಗಿ ಘೋಷಣೆಗಳನ್ನು ಕೂಗಿದ್ದು ಸಂಸತ್ತಿನ ಮುಖ್ಯ ದ್ವಾರದಲ್ಲಿ “ಮೋದಿ-ಅದಾನಿ ಒಂದೇ” ಎಂಬ ಬ್ಯಾನರ್ ಹಿಡಿದು ಪ್ರದರ್ಶಿಸಿದರು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ಪ್ರತಿಭಟನೆಯಲ್ಲಿ ಭಾಗಿಯಾಗಿರಲಿಲ್ಲ. ಅವರು ಬೆಳಿಗ್ಗೆ ಕಾಂಗ್ರೆಸ್ ನಿಯೋಗದೊಂದಿಗೆ ಉತ್ತರ ಪ್ರದೇಶದ ಹಿಂಸಾಚಾರ ಪೀಡಿತ ಸಂಭಾಲ್ ಜಿಲ್ಲೆಗೆ ತೆರಳಿದರು.
