ಉದಯವಾಹಿನಿ, ಮುಂಬೈ: ಬಾಲ್ಯದಲ್ಲಿ ಆಪ್ತ ಗೆಳೆಯರಾಗಿದ್ದ ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ರಿ ಇತ್ತೀಚೆಗೆ ಒಂದೇ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು. ಒಂದೇ ವೇದಿಕೆಯ ಬದಿಯಲ್ಲಿ ಕುಳಿತಿದ್ದ ವಿನೋದ್ ಕಾಂಬ್ಳೆಯನ್ನು ಸಚಿನ್ ತೆಂಡೂಲ್ಕರ್ ಭೇಟಿಯಾಗಿ ಮಾತನಾಡಿದ್ದರು. ಆದರೆ ಈ ವಿಡಿಯೋ ಕೆಲ ವಿವಾದಕ್ಕೆ ಕಾರಣವಾಗಿತ್ತು ವಿನೋದ್ ಕಾಂಬ್ರಿ ಮನವಿಯನ್ನು ಸಚಿನ್ ಪುರಸ್ಕರಿಸಿಲ್ಲ ಅನ್ನೋ ಮಾತುಗಳು ಕೇಳಿಬಂದಿತ್ತು. ವಿವಾದ ಏನೇ ಇದ್ದರೂ ವೇದಿಕೆಯಲ್ಲಿ ವಿನೋದ್ ಕಾಂಬಿ, ನಿರಾಸೆಗೊಂಡಿದ್ದು ವಿಡಿಯೋದಲ್ಲಿ ಸ್ಪಷ್ಟವಾಗಿತ್ತು. ಆದರೆ ಈ ವಿಡಿಯೋ ಎಲ್ಲೆಡೆ ಹರಿದಾಡಿದ ಬೆನ್ನಲ್ಲೇ 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಇದೀಗ ಕಾಂಬಿ ನೆರವಿಗೆ ಆಗಮಿಸಿದ್ದಾರೆ. ಸಚಿನ್ ತನ್ನ ಪಕ್ಕದಲ್ಲಿ ಕುಳಿತಿಕೊಂಡಿಲ್ಲ, ಹೆಚ್ಚು ಹೊತ್ತು ಮಾತನಾಡಿಲ್ಲ ಎಂದು ನಿರಾಸೆಗೊಂಡಿದ್ದ ವಿನೋದ್ ಕಾಂಬ್ಬಿಗೆ ಇದೀಗ ಕಪಿಲ್ ದೇವ್ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ವಿನೋದ್ ಕಾಂಬಿ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತೀವ್ರ ಕುಡಿತದ ಚಟ, ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವಿನೋದ್ ಕಾಂಬ್ರಿ, ಆರ್ಥಿಕವಾಗಿಯೂ ಕುಗ್ಗಿ ಹೋಗಿದ್ದಾರೆ. ಇದೀಗ ಸರಿಯಾಗಿ ಚಿಕಿತ್ಸೆ ಪಡೆಯಲು ಹಣವಿಲ್ಲದ ಪರಿಸ್ಥಿತಿ ತಲುಪಿದ್ದಾರೆ. ಈ ರೀತಿಯ ಪರಿಸ್ಥಿತಿ ಎದುರಿಸುತ್ತಿರುವದು ಮೊದಲೇನಲ್ಲ. ಇದೀಗ ವಿನೋದ್ ಕಾಂಬ್ರಿಯ ಚಿಕಿತ್ಸೆಗೆ ನೆರವು ನೀಡುವುದಾಗಿ ಕಪಿಲ್ ದೇವ್ ಹೇಳಿದ್ದಾರೆ.
