ಉದಯವಾಹಿನಿ, ಕೊಪ್ಪ: ಬಾಳಗಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಈ ಹಿಂದೆ ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ (ಯು.ಜಿ.ಸಿ) 12ನೇ ಕ್ರೀಡಾ ವಿಶೇಷ ಸೌಲಭ್ಯ ಯೋಜನೆಯಡಿ ಮಂಜೂರಾದ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಈಗ ಮರುಜೀವ ಬಂದಿದೆ. ₹1.99 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಕಳೆದ 5 ವರ್ಷಗಳ ಹಿಂದೆ ಚಾಲನೆ ಸಿಕ್ಕಿತ್ತು. ಯುಜಿಸಿ ಎರಡು ಕಂತುಗಳಲ್ಲಿ ₹70 ಲಕ್ಷ ನೀಡಲು ಉದ್ದೇಶಿಸಿತ್ತು. ಅದರಲ್ಲಿ ₹35 ಲಕ್ಷ ಬಿಡುಗಡೆ ಮಾಡಿತ್ತು. ಆದರೆ, ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹೊಂದಾಣಿಕೆ ಮೊತ್ತ (ಅಂದಾಜು ₹50 ಲಕ್ಷ) ಬಿಡುಗಡೆ ಮಾಡಿದ್ದರೆ, ಯು.ಜಿ.ಸಿಯಿಂದ ಬರಬೇಕಿದ್ದ ₹35 ಲಕ್ಷ ಸಿಗುತ್ತಿತ್ತು. ಆದರೆ, ಆ ಹಣ ಬಂದಿಲ್ಲ. ಕಾಮಗಾರಿ ನಿಧಾನವಾಗಿದ್ದರಿಂದ ಎಸ್.ಆರ್ ಮೌಲ್ಯ ವ್ಯತ್ಯಾಸವಾಗಿ ಇದೀಗ ಆ ಮೊತ್ತ ₹2.46 ಕೋಟಿಗೆ ತಲುಪಿದೆ.

Leave a Reply

Your email address will not be published. Required fields are marked *

error: Content is protected !!