ಉದಯವಾಹಿನಿ, ಚನ್ನಪಟ್ಟಣ: ತಾಲ್ಲೂಕಿನ ಪೌಳಿದೊಡ್ಡಿ ಗ್ರಾಮದಲ್ಲಿ ಮಂಗಳವಾರ ರೈತರೊಬ್ಬರ ಹೊಲದಲ್ಲಿ ರಾಗಿ ಬೆಳೆ ಕಟಾವು ಮಾಡುವಾಗ ಏಳು ಅಡಿ ಉದ್ದದ ಹೆಬ್ಬಾವು ಪ್ರತ್ಯಕ್ಷವಾಗಿದ್ದು, ಇದನ್ನು ನೀಲಸಂದ್ರ ಗ್ರಾಮದ ಸ್ನೇಕ್ ಹೇಮಂತ್ ರಕ್ಷಿಸಿ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಹೊಲದಲ್ಲಿ ರಾಗಿ ಬೆಳೆ ಕಟಾವು ಮಾಡುವಾಗ ಬೆಳೆ ಮಧ್ಯದಲ್ಲಿ ಮಲಗಿದ್ದ ಹೆಬ್ಬಾವು ನೋಡಿ ರೈತ-ಕಾರ್ಮಿಕರು ಆತಂಕಕ್ಕೊಳಗಾಗಿದ್ದಾರೆ. ನಂತರ ಅದನ್ನು ಸಾಯಿಸುವ ಬದಲು ಸ್ನೇಕ್ ಹೇಮಂತ್ ಅವರಿಗೆ ದೂರವಾಣಿ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅವರು ಹೆಬ್ಬಾವು ರಕ್ಷಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!