ಉದಯವಾಹಿನಿ, ಬೆಳಗಾವಿ: ಮುಖ್ಯಮಂತ್ರಿ ಸ್ಥಾನವನ್ನು ಒದ್ದು ಕಿತ್ತುಕೊಳ್ಳುತ್ತೀರಾ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ವಿಧಾನಸಭೆಯಲ್ಲಿ ಪ್ರಶ್ನಿಸಿದರು. ಸಂತಾಪ ಸೂಚನಾ ನಿರ್ಣಯದ ಮೇಲೆ ಡಿ.ಕೆ.ಶಿವಕುಮಾರ್ ಮಾತನಾಡುತ್ತಾ ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಚಿವಸ್ಥಾನ ಕೈತಪ್ಪುವ ಪರಿಸ್ಥಿತಿ ಇತ್ತು. ಆಗ ಕೃಷ್ಣ ಅವರ ಮನೆಯ ಬಾಗಿಲನ್ನು ಒದ್ದ ಘಟನೆಯನ್ನು ಉಲ್ಲೇಖ ಮಾಡಿದರು. ಆಗ ಮಧ್ಯೆ ಪ್ರವೇಶಿಸಿದ ಆರ್. ಅಶೋಕ್ ಮೇಲಿನಂತೆ ಪ್ರಶ್ನಿಸಿದರು.
ಮಾತನಾಡಿದ ಡಿ.ಕೆ.ಶಿವಕುಮಾರ್, ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸೇರಬೇಕಾದವರ ಸಚಿವರ ಹಾಗೂ ಖಾತೆಗಳ ಪಟ್ಟಿಯನ್ನು ನಾನೇ ಸಿದ್ಧಪಡಿಸ್ದೆಿ. ಆದರೆ ರಾಜಭವನಕ್ಕೆ ಹೋಗಿದ್ದು ಮಾತ್ರ 9 ಶಾಸಕರ ಹೆಸರು. ಅದರಲ್ಲಿ ನನ್ನ ಹೆಸರಿರಲಿಲ್ಲ. ಜಾತಿಗೊಂದು ಸಚಿವ ಸ್ಥಾನ ನೀಡಲಾಗಿತ್ತುಎಂದರು.
ಈ ವಿಚಾರವನ್ನು ದ್ವಾರಕಾನಾಥ್ ಎಂಬುವರ ಗಮನಕ್ಕೆ ತಂದಾಗ ಕೊಡುವುದಿಲ್ಲ, ಒದ್ದು ಕಿತ್ತುಕೊಳ್ಳಬೇಕೆಂಬ ಸಲಹೆ ನೀಡಿದರು. ಅದೇ ರೀತಿ ನಾನು, ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರ ಜೊತೆ ಹೋಗಿ ಎಸ್.ಎಂ.ಕೃಷ್ಣ ಅವರ ಮನೆಬಾಗಿಲನ್ನು ಒದ್ದು ಎಂದು ಹೇಳಿದರು. ಯಾವಾಗಲೂ ನಿಮೊಂದಿಗಿರುತ್ತೇವೆ. ನನ್ನ ಹೊರತು ಪ್ರಮಾಣವಚನ ಆಗಬಾರದು ಎಂದು ಹೇಳಿದೆ. ಆಗ ಕೃಷ್ಣ ಅವರು ಏನು ನಿನ್ನ ರೌದ್ರಾವತಾರ? ಎಂದು ಕೇಳಿದರು. ಅಲ್ಲದೆ ಈಗ ನೀನು ಮಂತ್ರಿಯಾಗಲು ಸಮಯ ಸರಿಯಿಲ್ಲ ಎಂದು ಜ್ಯೋತಿಷಿ ಹೇಳಿದ್ದಾರೆ ಎಂದರು. ಆದರೆ ಪಟ್ಟು ಹಿಡಿದು ಪ್ರಮಾಣವಚನದ ಸಮಯವನ್ನು ಬದಲಾಯಿಸಿ ಹೈಕಮಾಂಡ್ ಮೂಲಕ ಒಪ್ಪಿಗೆ ಪಡೆದು ನಾವೆಲ್ಲ ಸಚಿವರಾದೆವು ಎಂದು ಹೇಳಿದರು.
