ಉದಯವಾಹಿನಿ, ಬೆಂಗಳೂರು: ಶ್ರೀಗಂಧದ ತುಂಡುಗಳ ಅಕ್ರಮ ಸಾಗಾಣಿಕೆ ಮತ್ತು ಕಳವು ಮಾಡಲು ಯತ್ನಿಸಿದ್ದ ಇಬ್ಬರನ್ನು ಬಂಧಿಸಿರುವ ಸುಬ್ರಮಣ್ಯಪುರ ಮತ್ತು ಜ್ಞಾನಭಾರತಿ ಠಾಣೆ ಪೊಲೀಸರು ಒಟ್ಟು 20ಲಕ್ಷ ಮೌಲ್ಯದ 261ಕೆಜಿ 800ಗ್ರಾಂ ಶ್ರೀಗಂಧ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಕನಕಪುರ ಮುಖ್ಯರಸ್ತೆ ಕಡೆಯಿಂದ ಗುಬ್ಬಲಾಳ ಮೂಲಕ ಉತ್ತರಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿ ಮ್ಯಾಕ್ಸಿ ಟ್ರಕ್ನಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ನಗರಕ್ಕೆ ಸಾಗಾಟ ಮಾಡುತ್ತಿರುವ ಬಗ್ಗೆ ಸುಬ್ರಮಣ್ಯಪುರ ಠಾಣೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ತಕ್ಷಣ ಸ್ಥಳಕ್ಕೆ ಧಾವಿಸಿ, ಬಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಪ್ರಕರಣದಲ್ಲಿ ಭಾಗಿಯಾಗಿರುವ ಆತನ ಇಬ್ಬರು ಸಹಚರರ ಪೈಕಿ ಒಬ್ಬ ಆರೋಪಿಯು ಕೊಡಗು, ವಿರಾಜಪೇಟೆ, ಸಿದ್ದಾಪುರದ ಅರಣ್ಯಗಳಲ್ಲಿ ಸೌಧೆ ತರುವವನಂತೆ ಹೋಗಿ ಶ್ರೀಗಂಧದ ಮರಗಳನ್ನು ಕಡಿದುಕೊಂಡು ಬಂದು ಪಿರಿಯಾ ಪಟ್ಟಣದ ತನ್ನ ಮನೆ ಮತ್ತು ಹೊಲದಲ್ಲಿ ಬಚ್ಚಿಟ್ಟು, ಆತನ ಮತ್ತೋಬ್ಬ ಸಹಚರನಿಗೆ ಗಿರಾಕಿಗಳನ್ನು ಹುಡುಕಿ, ಶ್ರೀಗಂಧದ ಮರದ ತುಂಡುಗಳನ್ನು ಮಾರಾಟ ಮಾಡಲು ತಿಳಿಸುತ್ತಿದ್ದುದಾಗಿ ಹೇಳಿದ್ದಾನೆ.
