ಉದಯವಾಹಿನಿ, ಬೆಂಗಳೂರು: ಆನ್ ಲೈನ್ ಮುಖಾಂತರ ಲಕ್ಷಾಂತರ ರೂಗಳನ್ನು ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ್ದ ೧೦ ಮಂದಿಯ ಗ್ಯಾಂಗ್ ನ್ನು ಉತ್ತರ ವಿಭಾಗದಲ್ಲಿ ಸಿಇಎನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀನಿವಾಸ್ ರೆಡ್ಡಿ(೪೩)ಪ್ರಕಾಶ್ (೪೩)ಪ್ರಜ್ವಲ್ ಅಲಿಯಾಸ್ ಸೋಮು(೩೮)ಮಧುಸೂದನ್ ರೆಡ್ಡಿ (೪೧)ಕಿಶೋರ್ ಕುಮಾರ್ (೨೯)ಆಕಾಶ್ (೨೭)ಸುನೀಲ್ ಕುಮಾರ್(೪೫) ರವಿಶಂಕರ್ (೨೪)ಸುರೇಶ (೪೩)ಓಬಳ ರೆಡ್ಡಿ (೨೯),ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತ ಆರೋಪಿಗಳಿಂದ ೫೧ ಮೊಬೈಲ್ ಗಳು, ೨೭ ಡಿಬಿಟ್ ಕಾರ್ಡ್‌ಗಳು, ೧೦೮ ಬ್ಯಾಂಕ್ ಪಾಸ್‌ಬುಕ್ & ಚೆಕ್‌ಬುಕ್‌ಗಳು, ೪೮೦ ಸಿಮ್‌ಕಾರ್ಡ್‌ಗಳು, ೨ ಲ್ಯಾಪ್‌ಟಾಪ್‌ಗಳು, ೨ ಸಿಪಿಯು, ೪೮ ಅಕೌಂಟ್ ಕ್ಯೂ.ಆರ್.ಕೋಡ್, ೪೨ ರಬ್ಬರ್ ಸ್ಟಾಂಪಗಳು, ೧೦೩ ಉದ್ಯಮ್ & ಜಿಎಸ್ ಟಿ ದಾಖಲಾತಿಗಳು, ೨೩೦ ಕರೆಂಟ್ ಅಕೌಂಟ್ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಮಹಾಲಕ್ಷ್ಮೀಲೇಔಟ್‌ನ ೮ನೇ ಕ್ರಾಸ್‌ನ ವ್ಯಕ್ತಿಯೊಬ್ಬರು ಕಳೆದ ನ.೧೧ ರಂದು ಸೆನ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ಫೇಸ್ ಬುಕ್ ಪೇಜ್‌ವೊಂದರಲ್ಲಿ ಬಂದಿರುವ ಸ್ಟಾಕ್ ಇನ್ ವೆಸ್ಟ್ ಮೆಂಟ್ ಜಾಹೀರಾತಿನ ಲಿಂಕ್ ಮೂಲಕ ಬ್ರಾಂಡಿವೈನ್ ಗ್ರೂಪ್ ಆಂಡ್ ಇ೮ ಬ್ರಾಂಡಿವೈನ್ ಗ್ರೂಪ್ ಮಾರ್ಕೆಟಿಂಗ್‌ನ್ನು ಡೌನ್‌ಲೋಡ್ ಮಾಡಿಕೊಂಡು, ವಾಟ್ಸಾಪ್ ಗ್ರೂಪ್‌ನಲ್ಲಿ ಸೇರಿಕೊಂಡು ಬ್ರಾಂಡಿಸ್ಪೀಡ್ ಎಂಬ ಆಫ್‌ನ್ನು ಇನ್‌ಸ್ಟಾಲ್ ಮಾಡಿಕೊಂಡು ಐಪಿಓ ಸಬ್ ಕ್ರಿಪ್ಶನ್ ಮಾಡುವುದರಿಂದ ಹೆಚ್ಚು ಆದಾಯ ಗಳಿಸಬಹುದೆಂದು ಕಳೆದ ಅ. ೪ ರಿಂದ ನ.೯ ರವರಿಗೆ ಹಂತ ಹಂತವಾಗಿ ೮೮.೮೩ ಲಕ್ಷ ಹಣವನ್ನು ಅಪರಿಚಿತ ವ್ಯಕ್ತಿಗಳು ತಿಳಿಸಿರುವ ಬ್ಯಾಂಕ್ ಖಾತೆಗಳಲ್ಲಿ ಪಿರ್ಯಾದುದಾರರು ಹಣವನ್ನು ಹೂಡಿಕೆ ಮಾಡಿ ಮೋಸ ಹೋಗಿರುವುದನ್ನು ತಿಳಿಸಿದ್ದರು.
