ಉದಯವಾಹಿನಿ, ಬೆಂಗಳೂರು: ವಿಶ್ವಕ್ಕೆ ಡಾ. ಬಿಆರ್ ಅಂಬೇಡ್ಕರ್‌ರವರ ಸಂವಿಧಾನ ಪ್ರತಿಕ್ಷಣಕ್ಕೂ ಮಾದರಿ ಎಂಬುದು ಇಡೀ ವಿಶ್ವವೇ ನೆನೆಯುತ್ತದೆ ಆದರೆ ದೇಶದ ಗೃಹ ಸಚಿವ ಅಮಿತ್ ಶಾ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನೆನೆಯುವುದನ್ನು ಒಂದು ಫ್ಯಾಶನ್ ಆಗಿದೆ ಎಂಬುವ ಹೇಳಿಕೆ ಅತ್ಯಂತ ನೋವಿನ ಸಂಗತಿ ಇಂತಹ ಕ್ರೂರ ಮನಸ್ಥಿತಿಯ ವ್ಯಕ್ತಿಗಳನ್ನು ಕೂಡಲೇ ದೇಶದಿಂದ ಗಡಿಪಾರು ಮಾಡಿ ದೇಶದ ಕ್ಷಮೆ ಕೋರಿ ತೊಲಗಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಹಾಗೂ ಆ ಮೂಲಕ ಬಂದ ಪ್ರಜಾಪ್ರಭುತ್ವದ ಹಕ್ಕನ್ನು ಮೊದಲಿಂದಲೂ ಕಸಿಯುವ ಪ್ರಯತ್ನ ನಡೆಸುತ್ತಿರುವವರೇ ಕೋಮುವಾದಿ ಬಿಜೆಪಿಗರು, ಸಂಸತ್ ಭವನದಲ್ಲಿ ಮಾತನಾಡುವ ವೇಳೆ ಅಂಬೇಡ್ಕರ್ ಅವರ ಹೆಸರನ್ನ ಪ್ರಸ್ತಾಪಿಸಿ ಅಪಮಾನ ಗೊಳಿಸಿರುವುದು ನಿಜವಾದ ದೇಶದ್ರೋಹಿಯ ಕೃತ್ಯ ಇಂತಹ ಕೀಳು ಮಟ್ಟದ ಅಭಿರುಚಿ ಉಳ್ಳ ವ್ಯಕ್ತಿಗಳು ದೇಶದ ಗೃಹ ಸಚಿವರಾಗಿರುವುದು ದೇಶದ ದುರಂತ ಇಂತಹ ವ್ಯಕ್ತಿಯ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ಮನಸ್ಥಿತಿ ಇನ್ನೂ ಅತ್ಯಂತ ಹೀನಾಯ ಮನಸ್ಥಿತಿಯಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ತಿಳಿಸಿದರು.
