ಉದಯವಾಹಿನಿ, ಚೆನ್ನೈ: ಕೊಟ್ಟ ಮಾತಿನಂತೆ ಇಂದು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಇಂದು ತಮ್ಮ ನಿವಾಸದ ಎದುರು ಛಡಿಏಟು ಬಾರಿಸಿಕೊಂಡಿದ್ದಾರೆ. ಹಸಿರು ಮುಂಡು ಧರಿಸಿ, ಶರ್ಟ್ ರಹಿತ ಅಣ್ಣಾಮಲೈ ಮಾಧ್ಯಮ ಪ್ರತಿನಿಧಿಗಳು ಮತ್ತು ಭಾರತೀಯ ಜನತಾ ಪಕ್ಷದ ಸದಸ್ಯರ ಸಮುಖದಲ್ಲಿ ಉದ್ದವಾದ, ಬಿಳಿ ಚಾವಟಿಯಿಂದ ಮಗೆ ತಾವೇ ಹೊಡೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಕೆಲ ಬಿಜೆಪಿ ಕಾರ್ಯಕರ್ತರು ನಿಮಗೆ ನಾಚಿಕೆ ಇಲ್ಲವೇ ಸ್ಟಾಲಿನ್? , ಆರೋಪಿ ಜ್ಞಾನಶೇಖರನ್ ಅವರನ್ನು ಗಲ್ಲಿಗೇರಿಸಿ ಮತ್ತು ಶೇಮ್ ಆನ್ ಯೂ ಎಂಬ ಘೋಷಣೆಗಳ ಫಲಕಗಳನ್ನು ಬಿಜೆಪಿ ಬೆಂಬಲಿಗರು ಹಿಡಿದುಕೊಂಡಿದ್ದರು.ಅಣ್ಣಾಮಲೈ ಅವರನ್ನು ತಡೆಯಲು ಬೆಂಬಲಿಗರು ಧಾವಿಸುವ ಮುನ್ನವೇ ಅವರು ಸುಮಾರು ಎಂಟು ಬಾರಿ ಚಾಟಿ ಯಲ್ಲಿ ಹೊಡೆದುಕೊಂಡಿದ್ದರು.
ಸ್ವಯಂ ಚಾಟಿ ಬೀಸಿದ ಬಳಿಕ ಅವರು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು. ತಮಿಳು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಯಾರಿಗಾದರೂ ಈ ಆಚರಣೆಯ ಮಾರ್ಗಗಳು ಎಂದು ತಿಳಿಯುತ್ತದೆ ಎಂದು ಅವರು ಹೇಳಿದರು.
