ಉದಯವಾಹಿನಿ, ನವದೆಹಲಿ: ಇತ್ತೀಚಿಗೆ ನಿಧನರಾದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಚಿತಾಭಸ್ಮವನ್ನು ಮಜ್ಜು ಕಾ ತಿಲಾ ಗುರುದ್ವಾರ ಬಳಿಯ ಯಮುನಾ ನದಿಯಲ್ಲಿ ಸಿಖ್ ಸಂಪ್ರದಾಯದಂತೆ ಅವರ ಕುಟುಂಬ ಸದಸ್ಯರು ಭಾನುವಾರ ವಿಸರ್ಜಿಸಿದ್ದಾರೆ. ನಿಗಮಬೋಧ ಘಾಟ್ ನಿಂದ ನಿನ್ನೆ ಬೆಳಿಗ್ಗೆ, ಚಿತಾಭಸ್ಮ ಸಂಗ್ರಹಿಸಿದ ನಂತರ ಗುರುದ್ವಾರ ಬಳಿಯ ಯಮುನಾ ನದಿಯ ದಡದಲ್ಲಿರುವ ಅಷ್ಮ ಘಾಟ್ ಗೆ ತೆಗೆದೊಯ್ದು, ಬಳಿಕ ನದಿಯಲ್ಲಿ ವಿಸರ್ಜನೆ ಮಾಡಿದ್ದಾರೆ. ಈ ವೇಳೆ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಮತ್ತು ಅವರ ಮೂವರು ಪುತ್ರಿಯರಾದ ಉಪಿಂದರ್ ಸಿಂಗ್. ದಮನ್ ಸಿಂಗ್ ಮತ್ತು ಅಮೃತ್‌ ಸಿಂಗ್ ಮತ್ತು ಇತರ ಹತ್ತಿರದ ಸಂಬಂಧಿಕರು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ಚಿತಾಭಸ್ಮ ವಿಸರ್ಜನೆ ಸ್ಥಳದಲ್ಲಿ ಡಾ. ಮನಮೋಹನ್ ಸಿಂಗ್ ಕುಟುಂಬದವರೊಂದಿಗೆ ಯಾವುದೇ ಹಿರಿಯ ಕಾಂಗ್ರೆಸ್ ನಾಯಕರು ಅಥವಾ ಗಾಂಧಿ ಕುಟುಂಬದವರು ಕಂಡುಬಂದಿಲ್ಲ, ಜನವರಿ 3 ರಂದು ದಿವಂಗತ ಪ್ರಧಾನಿಯವರ ಅಧಿಕೃತ ನಿವಾಸ 3. ಮೋತಿಲಾಲ್ ನೆಹರು ಮಾರ್ಗದಲ್ಲಿ ‘ಅಖಂಡ ಪಥ ನಡೆಯಲಿದ್ದು, ಗುರುದ್ಧಾರದಲ್ಲಿ ಭಾನುವಾರ ಕೆಲವು ಪ್ರಾರ್ಥನೆಗಳು ನಡೆದವು. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ದಿವಂಗತ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಕಾಂಗ್ರೆಸ್ ದೇಶಕ್ಕೆ ಮನಮೋಹನ್ ಸಿಂಗ್ ನೀಡಿರುವ ಸೇವೆ, ಅವರ ಸಮರ್ಪಣೆ ಮತ್ತು ಸರಳತೆಯನ್ನು ಯಾವಾಗಲೂ ಸ್ಮರಿಸುತ್ತೇವೆ ಎಂದು ಪೋಸ್ಟ್ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!