ಉದಯವಾಹಿನಿ, ನವದೆಹಲಿ: ನನ್ನ ತಂದೆಯನ್ನು ಆರ್ಎಸ್ಎಸ್ ಭೇಟಿಗೆ ಸಂಘಿ ಎಂದು ಕರೆಯುವ ರಾಹುಲ್ ಅವರ ಭಕ್ತ-ಚೇಲಾಗಳು, ಅವರ ತಾಯಿ ಸೋನಿಯಾಗಾಂಧಿ ಮೌತ್ ಕಾ ಸೌದಾರ್ಗ ಎಂದು ಕರೆದ ನರೇಂದ್ರ ಮೋದಿ ಅವರನ್ನು ಸಂಸತ್ತಿನಲ್ಲಿ ಏಕೆ ತಬ್ಬಿಕೊಂಡರು ಎಂದು ಮಾಜಿ ರಾಷ್ಟ್ರಪತಿ ದಿ. ಪ್ರಣವ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಮತ್ತೆ ಸ್ವಪಕ್ಷೀಯರ ವಿರುದ್ಧವೇ ಟೀಕಾ ಪ್ರಹಾರ ನಡೆಸಿದ್ದಾರೆ.
ಈ ಕುರಿತು ತಮ ಅಧಿಕೃತ ಸಾಮಾಜಿಕ ಜಾಲಾತಾಣ ಎಕ್ಸ್ ನಲ್ಲಿ ಸುಧೀರ್ಘ ಪೋಸ್ಟ್ ಮಾಡಿರುವ ಅವರು, ರಾಹುಲ್ ಗಾಂಧಿ ಅವರ ನಿಷ್ಠಾವಂತರು ಪ್ರಣಬ್ ಮುಖರ್ಜಿಯವರನ್ನು ಸಂಘಿ ಎಂದು ಕರೆಯುತ್ತಾರೆ. ಕಾಂಗ್ರೆಸ್ ಪಕ್ಷವನ್ನು ಸಮರ್ಥಿಸಿಕೊಂಡಿರುವ ತನ್ನ ಸಹೋದರನ ವಿರುದ್ಧವೂ ಛೀಮಾರಿ ಹಾಕಿದ್ದಾರೆ.
ತಮ್ಮ ತಂದೆಯ ನಿಧನದ ನಂತರ ಯಾವುದೇ ಸಿಡಬ್ಲ್ಯೂಸಿ ಸಭೆಯನ್ನು ಕರೆಯಲಾಗಿಲ್ಲ ಎಂದು ಆರೋಪಿಸಿದ ಕೆಲವು ದಿನಗಳ ನಂತರ ಸ್ವಂತ ಸಹೋದರ ಅಭಿಜಿತ್ ಮುಖರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾಗಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿಗೆ ಭೇಟಿ ನೀಡಿದ್ದಕ್ಕಾಗಿ ಪ್ರಣಬ್ ಮುಖರ್ಜಿ ಅವರನ್ನು ಸಂಘಿ ಎಂದು ಕರೆದ ರಾಹುಲ್ ಗಾಂಧಿಯವರ ಭಕ್ತ-ಚೇಲಾಗಳು ಎಂದು ಶರ್ಮಿಷ್ಠಾ ಮುಖರ್ಜಿ ಅವರು 2018 ರಲ್ಲಿ ಸಂಸತ್ತಿನ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಬ್ಬಿಕೊಂಡ ಕಾಂಗ್ರೆಸ್ ಸಂಸದರಿಗೆ ಸವಾಲು ಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!