ಉದಯವಾಹಿನಿ, ಹಾವೇರಿ: ಜಿಲ್ಲೆಗೆ ಅಪಖ್ಯಾತಿ ತಂದ ಸಾಮೂಹಿಕ ಅತ್ಯಾಚಾರ ಘಟನೆ, ನಿರಂತರ ಮಳೆಗೆ ಬೆಳೆ ಹಾನಿಯಾಗಿ ತತ್ತರಿಸಿದ್ದ ರೈತರು ನದಿಗಳ ಪ್ರವಾಹ ಸ್ಥಿತಿಗೆ ಕೊಚ್ಚಿಕೊಂಡ ಹೋದ ಬೆಳೆ, ಅಪಘಾತ ಹಾಗೂ ಅವಘಡಗಳಿಂದ ಉಂಟಾದ ಸಾವಿನ ಸರಣಿ, ಬ್ಯಾಡಗಿ ಎಪಿಎಂಸಿ ಕಟ್ಟಡಕ್ಕೆ ನುಗ್ಗಿ ವಾಹನಗಳಿಗೆ ಬೆಂಕಿ ಹೆಚ್ಚಿದ್ದ ರೈತರು. ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಜಯಭೇರಿ ಬಾರಿಸುವ ಮೂಲಕ ಹಾವೇರಿ ಜಿಲ್ಲೆಯನ್ನು ಬಿಜೆಪಿ ಮುಕ್ತ ಮಾಡಿದ ಕಾಂಗ್ರೆಸ್ ಪಡೆ… 2024ರಲ್ಲಿ ನಡೆದ ಇಂಥ ಹಲವು ಘಟನೆಗಳಿಗೆ ಹಾವೇರಿ ಜಿಲ್ಲೆ ಸಾಕ್ಷಿಯಾಯಿತು. ಹಳೇ ವರ್ಷ 2024 ಕಳೆದು, ಹೊಸ ವರ್ಷ 2025ಕ್ಕೆ ಕಾಲಿಡುತ್ತಿದ್ದೇವೆ. ರೈತಾಪಿ ನಾಡು ಹಾವೇರಿ, 2024ರ ಹಳೆ ವರ್ಷದಲ್ಲಿ ಸಾಕಷ್ಟು ಎಳು-ಬೀಳುಗಳನ್ನು ಕಂಡಿದೆ. ಜಿಲ್ಲೆಯ ಬಹುತೇಕರಿಗೆ ಕೃಷಿಯೇ ಮೂಲ ಕಸುಬು. 2023ರಲ್ಲಿ ಬರಗಾಲ ಎದುರಿಸಿದ್ದ ರೈತರು, 2024ರಲ್ಲೂ ಬರಗಾಲದ ಭೀತಿಯಲ್ಲಿದ್ದರು. ಮುಂಗಾರು ಆರಂಭದಲ್ಲಿ ಮಳೆ ಸುರಿಯದಿದ್ದರಿಂದ, ಬರಗಾಲ ಬಂದೇ ಬಿಟ್ಟಿತೆಂದು ಮತ್ತಷ್ಟು ಭಯಗೊಂಡಿದ್ದರು. ಆದರೆ, ಮುಂಗಾರು ಮಧ್ಯದಲ್ಲಿ ಸುರಿದ ಮಳೆ ಪ್ರವಾಹ ಸ್ಥಿತಿ ಉಂಟು ಮಾಡಿತು. ವರದಾ, ತುಂಗಭದ್ರಾ ನದಿಗಳು ತುಂಬಿ ಹರಿದವು. ಅಚ್ಚುಕಟ್ಟು ಪ್ರದೇಶಗಳ ಜಮೀನಿಗೆ ನೀರು ನುಗ್ಗಿ, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಕೊಚ್ಚಿಕೊಂಡು ಹೋದವು.

Leave a Reply

Your email address will not be published. Required fields are marked *

error: Content is protected !!