ಉದಯವಾಹಿನಿ, ಬೆಂಗಳೂರು: ಹಕ್ಕುಚ್ಯುತಿ ಉಲ್ಲಂಘನೆ ಮಾಡಿ ನನ್ನನ್ನು ಕಾನೂನುಬಾಹಿರವಾಗಿ ಬಂಧಿಸಿರುವ ಪೊಲೀಸರ ವಿರುದ್ಧ ಕಾನೂನು ಕ್ರಮ ಆಗಲೇಬೇಕು. ಇದರಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ ಎಂದು ವಿಧಾನಪರಿಷತ್ ಪರಿಷತ್ ಸದಸ್ಯ, ಮಾಜಿ ಸಚಿವ ಸಿ.ಟಿ.ರವಿ ಮತ್ತೆ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆಯ ಅಧಿಕಾರಿಗಳ ವರ್ತನೆ ಸಂವಿಧಾನ ಬದ್ಧವಾಗಿಲ್ಲ. ಪೊಲೀಸರ ವಿರುದ್ಧ ಕ್ರಮ ಆಗಲೇಬೇಕು. ನಾನು ರಾಜ್ಯಪಾಲರಿಗೆ ಎಲ್ಲವನ್ನೂ ದೂರಿನ ಮೂಲಕ ಹೇಳಿದ್ದೇನೆ. ಯಾರಿಂದ ಬೆದರಿಕೆ ಇದೆ ಅಂತಲೂ ಹೇಳಿದ್ದೇನೆ. ಜನ, ಕಾರ್ಯಕರ್ತರು ನನ್ನ ಜತೆ ಇದ್ದಾರೆ. ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ, ಎದುರಿಸುತ್ತೇವೆ ಎಂದು ಹೇಳಿದರು.
ನನ್ನ ದೂರಿನ ಮೇಲೆ ಇನ್ನೂ ಎಫ್ಐಆರ್ ಹಾಕಿಲ್ಲ.ಸಿಐಡಿ ಪೊಲೀಸ್ ಅಧಿಕಾರಿಗಳ ಗಮನಕ್ಕೆ ನಾನು ಕೊಟ್ಟ ದೂರು ಬಂದೇ ಇಲ್ಲ ಎಂದು ಹೇಳುತ್ತಿದ್ದಾರೆ. ಇದು ಸಂವಿಧಾನಕ್ಕೆ ಎಸಗಿದ ಅಪಚಾರ ಅಲ್ಲವೇ ಎಂದು ಪ್ರಶ್ನಿಸಿದ ರವಿ, ಸಚಿವೆ ಲಕ್ಷಿ ಹೆಬ್ಬಾಳ್ಕರ್ ದೂರು, ಅಪರಿಚಿತರಿಂದಲೇ ಕೊಡಿಸಲಾಗಿತ್ತು. ನನ್ನ ಮೇಲೆ ಹಲ್ಲೆ ಮಾಡಿದವ ವಿರುದ್ಧ ದೂರು ಮಾತ್ರ ನಮಗೆ ಕೊಟ್ಟಿದ್ದಾರೆ ಎಂದು ಸಿಐಡಿಯವರು ಹೇಳುತ್ತಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
