ಉದಯವಾಹಿನಿ, ಬೆಂಗಳೂರು: ಆಂಧ್ರಶೈಲಿಯ ನಾನ್ವೆಜ್ ರೆಸ್ಟೋರೆಂಟ್ ನಂದನ ಪ್ಯಾಲೇಸ್ ತನ್ನ ೨೬ನೇ ಶಾಖೆಯನ್ನು ವೈಟ್ ಫೀಲ್ಡ್ (ಕಾಡುಗೋಡಿ)ನಲ್ಲಿ ತೆರೆದಿದೆ.
ಶುಕ್ರವಾರ ಈ ಹೊಟೇಲ್ ಗೆ ಆಂಧ್ರಪ್ರದೇಶ ವಿಧಾನಸಭಾ ಕ್ಷೇತ್ರ ಶಾಸಕ . ಗುರಜಾಲ ಜಗನ್ ಮೋಹನ್ ಹಾಗು ನಟಿ ತಾರ ಅನುರಾಧಾ ಚಾಲನೆ ನೀಡಿದರು.
ಈ ಕುರಿತು ಮಾತನಾಡಿದ ನಂದನ ಪ್ಯಾಲೇಸ್ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಡಾ. ಆರ್. ರವಿಚಂದರ್, ಗ್ರಾಹಕರು ನಮ್ಮ ಹೊಟೇಲ್ ಮೇಲಿಟ್ಟಿರುವ ವಿಶ್ವಾಸ ಮತ್ತು ನಂಬಿಕೆಯಿಂದಾಗಿ ನಾವು ಹೊಸ ಶಾಖೆಯನ್ನು ತೆರೆಯಲು ಅನುಕೂಲವಾಗುತ್ತಿದೆ. ಇದು ನಮ್ಮ ೨೬ನೇ ಶಾಖೆಯಾಗಿದೆ. ೧೯೮೯ ರಿಂದ ನಾನು ಈ ಆಹಾರೋದ್ಯಮ ಕ್ಷೇತ್ರದಲ್ಲಿದ್ದೇನೆ. ನಮ್ಮಲ್ಲಿ ಮಟನ್ ಪೆಪ್ಪರ್ ಫ್ರೈ, ಗೀ ರೋಸ್ಟ್, ಫ್ರಾನ್ಸ್ ಫ್ರೈ, ಚಿಕನ್ ಬಿರಿಯಾನಿ ಸೇರಿದಂತೆ ಹಲವಾರು ಖಾದ್ಯಗಳು ಹೆಚ್ಚು ಫೇಮಸ್ ಆಗಿದೆ. ಗ್ರಾಹಕರಿಗೆ ನಾವು ಗುಣಮಟ್ಟವಾದ ರುಚಿಕರವಾದ ಖಾದ್ಯಗಳನ್ನು ನೀಡುತ್ತಿದ್ದೇವೆ. ಗ್ರಾಹಕರ ಬೇಡಿಕೆ ಅನುಗುಣವಾಗಿ ಶಾಖೆಯ ವಿಸ್ತರಣೆ ಮಾಡುತ್ತಿದ್ದೇವೆ ಎಂದರು.
