ಉದಯವಾಹಿನಿ, ಬೆಂಗಳೂರು: ಮೈಸೂರು ಉದಯಗಿರಿಯಲ್ಲಿ ನಡೆದಿರುವ ಕಲ್ಲುತೂರಾಟ ಪ್ರಕರಣದಲ್ಲಿ ಪೊಲೀಸರು ಕರ್ತವ್ಯಲೋಪ ಮಾಡಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ ಪೊಲೀಸರಿಗೆ ಏನಾಗಿದೆ? ಕನಿಷ್ಠ ಸಾಮಾನ್ಯ ಪ್ರಜ್ಞೆ ಬೇಡವೇ?, ಯಾರೋ ಆರ್ಎಸ್ಎಸ್ನ ವ್ಯಕ್ತಿ ಧಾರ್ಮಿಕ ನಿಂದನೆಯ ಕೃತ್ಯವೆಸಗಿದ್ದಾನೆ. ಆತನ ಮೇಲೆ ಪ್ರಕರಣ ದಾಖಲಾಗಿ ಬಂಧಿಸಲಾಗಿದೆ.
ಆರೋಪಿಯನ್ನು ಮುಸ್ಲಿಂ ಜನಸಂಖ್ಯೆ ಶೇ.99 ರಷ್ಟಿರುವ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಸಹಜವಾಗಿಯೇ ಜನ ಒಟ್ಟಾಗಿ ಸೇರಿದ್ದಾರೆ, ಗಲಾಟೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರಿಗೆ ಬುದ್ಧಿ ಬೇಡವೇ..? ಥೂ… ಆಡಳಿತ ನಡೆಸುವುದು ಸಚಿವರ ಜವಾಬ್ದಾರಿಯಷ್ಟೇ ಅಲ್ಲ, ಅಧಿಕಾರಿಗಳಿಗೂ ಹೊಣೆಗಾರಿಕೆ ಇದೆ. ಸ್ಥಳೀಯವಾಗಿ ಕೆಲಸ ಮಾಡುವ ಪೊಲೀಸರಿಗೆ ತಲೆಯಲ್ಲಿ ಬುದ್ಧಿ ಬೇಡವೇ?, ರಸ್ತೆಯಲ್ಲಿ ಹೋಗುವ ಕೆಲಸಕ್ಕೆ ಬಾರದ ಅನಾಮಧೇಯನಿಗಿರುವ ಸಾಮಾನ್ಯ ಜ್ಞಾನ ದೊಡ್ಡ ಬ್ಯಾಡ್‌್ಜಗಳನ್ನು ಹಾಕಿಕೊಂಡು ತಿರುಗುವ ಅಧಿಕಾರಿಗಳಿಗೆ ಇಲ್ಲವೇ?, ಬಂಧನದ ನಂತರ ನಡೆದ ಗಲಭೆ ಪ್ರಕರಣಗಳಿಗೆ ಸ್ಥಳೀಯ ಪೊಲೀಸರೇ ಕಾರಣ ಎಂದು ತರಾಟೆಗೆ ತೆಗೆದುಕೊಂಡರು.

ಭದ್ರಾವತಿಯ ಕಾಂಗ್ರೆಸ್ ಶಾಸಕ ಸಂಗಮೇಶ್ರ ಪುತ್ರ ಮಹಿಳಾ ಅಧಿಕಾರಿಯ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿ ದರ್ಪ ಪ್ರದರ್ಶಿಸಿರುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾರೇ ಇರಲಿ, ಸಚಿವರಿರಲಿ, ಶಾಸಕರಿರಲಿ ಅಥವಾ ಅವರ ಮಕ್ಕಳೇ ಇರಲಿ ಅಧಿಕಾರಿಗಳನ್ನು ಅವಹೇಳನಕಾರಿಯಾಗಿ ನಿಂದಿಸುವುದು ಶಿಕ್ಷಾರ್ಹ ಅಪರಾಧ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಿದೆ ಎಂದರು. ಕೆಪಿಸಿಸಿಗೆ ಪೂರ್ಣ ಪ್ರಮಾಣದ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಕೆಲಸ ನಿರ್ವಹಿಸುತ್ತಿದ್ದಾರೆ. ಪಕ್ಷದ ಅಧ್ಯಕ್ಷರ ಬದಲಾವಣೆ ಬಗ್ಗೆ ಯಾರೂ ಚರ್ಚೆ ಮಾಡಬಾರದು ಎಂದು ಎಐಸಿಸಿ ಅಧ್ಯಕ್ಷರು ಸೂಚನೆ ನೀಡಿದ್ದಾರೆ. ಉಳಿದ ನಿರ್ಧಾರಗಳನ್ನು ಹೈಕಮಾಂಡ್ ಸೂಕ್ತ ಕಾಲಕ್ಕೆ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!