ಉದಯವಾಹಿನಿ, ಹರಿಹರ: ನಗರದ ಗುಹಾರಣ್ಯ ಕ್ಷೇತ್ರವೆಂದೇ ಪ್ರಸಿದ್ಧವಾಗಿರುವ ಐತಿಹಾಸಿಕ ಸ್ಥಳವಾದ ಹರಿಹರದಲ್ಲಿ ಶ್ರೀ ಹರಿಹರೇಶ್ವರನ ಬ್ರಹ್ಮ ರಥೋತ್ಸವ ವಿಧಿ ವಿಧಾನಗಳಿಂದ ಜರುಗಿತು.ಬೆಳಗಿನ ಜಾವದಿಂದ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಪೂಜೆಗಳು ನಡೆದು ಹರಿಹರನ ಉತ್ಸವ ಮೂರ್ತಿಯು ಪಲ್ಲಕ್ಕಿಯೊಂದಿಗೆ ಸಕಲ ವಾದ್ಯಗಳಿಂದ ಮೆರವಣಿಗೆ ಮೂಲಕ ರಥೋತ್ಸವದ ಬಳಿ ಕರೆ ತರಲಾಯಿತು. ನಂತರ ಉತ್ಸವ ಮೂರ್ತಿ ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ಶುಭ ಮುಹೂರ್ತದಲ್ಲಿ 10:25 ನಿಮಿಷಕ್ಕೆ ರಥೋತ್ಸವವೂ ಚಾಲನೆಗೊಂಡಿತು. ಭಕ್ತರು ರಥೋತ್ಸವದ ಸಂದರ್ಭದಲ್ಲಿ ಬಾಳೆಹಣ್ಣು ಕಳಸಕ್ಕೆ ಹಾಕುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿ ಹರಿಹರನ ಕೃಪೆಗೆ ಪಾತ್ರರಾದರು. ಭಕ್ತರು ಹರಿ ಗೋವಿಂದ ಹರಿ ಗೋವಿಂದ ಶ್ರೀ ರಾಮ ರಾಮ ಗೋವಿಂದ ಹರ ಹರ ಮಹಾದೇವ್ ಭಕ್ತಿಯ ಜಯ ಘೋಷಗಳನ್ನು ಕೂಗುತ್ತಾ ಭಾವುಕರಾದರು.ರಥೋತ್ಸವಕ್ಕೆ ಶಾಸಕ ಬಿಪಿ ಹರೀಶ್ ಚಾಲನೆ ನೀಡಿದರು. ಗ್ಯಾರಂಟಿ ಅನುಷ್ಠಾನದ ತಾಲೂಕು ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ನಗರ ಠಾಣೆ ಇನ್ಸ್ಪೆಕ್ಟರ್ ದೇವಾನಂದ ಎಸ್, ದೇವಸ್ಥಾನದ ಆಡಳಿತ ಅಧಿಕಾರಿಯ ಆನಂದ್, ವಾರಿಜ, ಚುನಾಯಿತರ ಪ್ರತಿನಿಧಿಗಳು, ಸರ್ವಭಕ್ತ ವೃಂದದವರು ರಥೋತ್ಸವದಲ್ಲಿ ಭಾಗವಹಿಸಿದ್ದರು.
