ಉದಯವಾಹಿನಿ ಕುಶಾಲನಗರ:- ಶಿರಂಗಾಲ ಗ್ರಾಮದ ಶ್ರೀ ಅಣ್ಣಯ್ಯ ರವರು ನಿವೃತ್ತ ನೌಕರರು ಇವರು ಶಿರಂಗಾಲ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ರೂಪಾಯಿ 20,000 ಮೌಲ್ಯದ ಲೇಖನ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ಶ್ರೀ ಅಣ್ಣಯ್ಯ ರವರು ದಾನವಾಗಿ ನೀಡಿದ ಪುಸ್ತಕಗಳನ್ನು ನಲ್ಲೂರು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು, ಶಿರಂಗಾಲದ ಪ್ರೌಢಶಾಲಾ ವಿದ್ಯಾರ್ಥಿಗಳು, ಮತ್ತು ಶಿರಂಗಾಲ ಮಾದರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶ್ರೀ ಅಣ್ಣಯ್ಯರವರನ್ನು ಶಾಲಾವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಭೆಯ ಅಧ್ಯಕ್ಷ ಸ್ಥಾನವನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಮನುಕುಮಾರ್ ರವರು ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಶ್ರೀ ಎಂ.ಪಿ.ವಸಂತ ರವರು ಸರ್ವರನ್ನು ಸ್ವಾಗತಿಸಿದರು. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಪ್ರದೀಪ ರವರು ಉಪಸ್ಥಿತರಿದ್ದರು. ಶಿರಂಗಾಲ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಲೋಕೇಶ್ ರವರು ದಾನದ ಮಹತ್ವವನ್ನು ತಿಳಿಸಿದರು. ನಲ್ಲೂರು ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶ್ರೀ ಮಹೇಶ್ ರವರು ದಾನಿಗಳನ್ನು ಗುಣಗಾನ ಮಾಡಿದರು.ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯಾದ ಶ್ರೀಮತಿ ಸರೋಜಾ ರವರು, ಎಸ್ ಡಿ ಎಂ ಸಿ ಸದಸ್ಯರುಗಳು ಮತ್ತು ಶಿಕ್ಷಕರಾದ ವಿ.ಎಸ್. ಹೇಮಲತಾ ಹಾಗೂ ಮಹಾದೇವ್ ಉಪಸ್ಥಿತರಿದ್ದರು.
