ಉದಯವಾಹಿನಿ, ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಧಮ್ಮು, ತಾಕತ್ ಇದ್ದರೆ, ಷರತ್ತುಗಳನ್ನು ತೆಗೆದು ಹಾಕಿ ಐದು , ಗ್ಯಾರಂಟಿ ಘೋಷಣೆ ಮಾಡಲಿ ಅಂತ ಮಾಜಿ ಸಚಿವ ಆರ್ ಅಶೋಕ್ ಸವಾಲು ಹಾಕಿದ್ದಾರೆಅವರು ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದರು.ಇದೇ ವೇಳೆ ಅವರು ಮಾತನಾಡುತ್ತ, ಕಾಂಗ್ರೆಸ್ ಘೋಷಣೆ ಜಾರಿ ಮಾಡದೇ ಹೋದಲ್ಲಿ, ಅವರು ಮನೆಗೆ ಹೋಗುವುದು ನಿಶ್ಚಿತವಾಗಿದ್ದು, ನೀವು , ಗ್ಯಾರಂಟಿ ಘೋಷಣೆ ಮಾಡುವ ವೇಳೆಯಲ್ಲಿ ಕೇಂದ್ರ ಸರ್ಕಾರ ಅನುಮತಿ ಕೇಳಿದ್ದಿರಾ ಅಂತ ಪ್ರಶ್ನೆ ಮಾಡಿದರು, ಇದೇ ವೇಳೇ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ದ ಕಿಡಿಕಾರಿ ಡಿ.ಕೆ. ಶಿವಕುಮಾರ್ ಅಣ್ಣ ನೀನು ಕೊಟ್ಟ ಭರವಸೆ ಉಳಿಸಿಕೊಳ್ಳಿಸುಳ್ಳು ಹೇಳಿ ತಪ್ಪಿಸಿಕೊಳ್ಳಬೇಡಿ ಅಂತ ವ್ಯಂಗ್ಯವಾಡಿದರು.
