ಉದಯವಾಹಿನಿ, ಔರಾದ್ : ಪಟ್ಟಣದಲ್ಲಿ ಆಲಿಕಲ್ಲು, ಮಿಂಚು ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಮುಂಜಾನೆ 11ಕ್ಕೆ ಒಂದು ಗಂಟೆಗೂ ಹೆಚ್ಚಿನ ಕಾಲ ಮಳೆಯಾಗಿದೆ ಸಾಯಂಕಾಲ ರಾತ್ರಿ ಸಹಿತ ಧಾರಾಕಾರ ಮಳೆ ಸುರಿದಿದೆ. ಒಂದು ವಾರದಿಂದ ಪಟ್ಟಣದಲ್ಲಿ ಬಿಸಿಲಿನ ಪ್ರಖರತೆಗೆ ಬೆಚ್ಚಿ ಬಿದ್ದ ಜನರಿಗೆ ಮಳೆರಾಯನ ಆಗಮನದಿಂದ ತಂಪಾದ ವಾತಾವರಣದ ಲಭಿಸಿದೆ. ಗುಡುಗು ಸಹಿತ ಜೋರಾದ ಗಾಳಿಯಿಂದ ಮಳೆ ಆರ್ಭಟಿಸಿದೆ. ಪಟ್ಟಣದ ಕೆಲವೊಂದು ಕಡೆ ಆಲಿಕಲ್ಲು ಬಿದ್ದಿರುವ ಮಾಹಿತಿ ಲಭ್ಯವಾಗಿದೆ. ಕೆಲವೊಂದು ಕಡೆ ಗುಡಿಸಲುಗಳಿಗೆ ಮಳೆ ನೀರು ನುಗ್ಗಿ ಆವಾಂತರ ಸೃಷ್ಟಿಸಿದೆ, ಯಾವುದೇ ಆಸ್ತಿ ಹಾನಿ ಪ್ರಾಣ ಹಾನಿಯ ಬಗ್ಗೆ ವರದಿಯಾಗಿಲ್ಲ.
