ಉದಯವಾಹಿನಿ , ಬಿಳಿ ಕೂದಲನ್ನು ತಕ್ಷಣ ಕಪ್ಪಾಗಿಸಲು ಹೇರ್ ಡೈಗಳ ಬಳಕೆ ಮಾಡುವುದರಿಂದ ಇದು ಆ ಕ್ಷಣದಲ್ಲಿ ಬಿಳಿ ಕೂದಲನ್ನು ಕಪ್ಪು ಬಣ್ಣಕ್ಕೆ ತಿರುಗಿಸುತ್ತವೆ. ಆದರೆ, ಭವಿಷ್ಯದಲ್ಲಿ ಇದು ಕೂದಲನ್ನು ಹಾನಿಗೊಳಿಸುವುದರ ಜೊತೆಗೆ ಚರ್ಮ ಸಂಬಂಧಿತ ಸಮಸ್ಯೆಗಳನ್ನು ಕೂಡ ಸೃಷ್ಟಿಸಬಹುದು. ಬಿಳಿ ಕೂದಲಿಗೆ ನೈಸರ್ಗಿಕ ಪರಿಹಾರ ಪಡೆಯಲು ನೀವು ಮನೆಯಲ್ಲಿ ಬಿಸಾಡುವ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಗಳನ್ನು ಬಳಸಬಹುದು. ಇವು ಬಿಳಿ ಕೂದಲಿನ ಸಮಸ್ಯೆಯನ್ನು ತೊಡೆದುಹಾಕಲು ನೈಸರ್ಗಿಕ ಪರಿಹಾರವಾಗಿದೆ. ಬೂದು ಕೂದಲಿನ ಸಮಸ್ಯೆಯಿಂದ ಪರಿಹಾರ ಪಡೆಯಲು ಬಯಸುತ್ತಿರುವವರಿಗೆ ತೆಂಗಿನ ಎಣ್ಣೆ ಜೊತೆ ನೀವು ಕಸ ಎಂದು ಬಿಸಾಕುವ ಈರುಳ್ಳಿ, ಬೆಳ್ಳುಳ್ಳಿ ಸಿಪ್ಪೆ ಬಿಳಿ ಕೂದಲನ್ನು ನಿಮಿಷಗಳಲ್ಲಿ ಕಪ್ಪು ಬಣ್ಣಕ್ಕೆ ತಿರುಗಿಸುವ ಭರವಸೆಯನ್ನು ನೀಡುತ್ತವೆ.
ಬಿಳಿ ಕೂದಲನ್ನು ಕಪ್ಪಾಗಿಸಲು ಮೊದಲು ಕಬ್ಬಿಣದ ಪ್ಯಾನ್ ಅನ್ನು ಒಲೆ ಮೇಲಿಟ್ಟು ಕಾಯಿಸಿ ಅದಾರಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಯನ್ನು ಹಾಕಿ ಅವು ಕಪ್ಪಾಗುವವರೆಗೂ ರೋಸ್ಟ್ ಮಾಡಿ. ಬೇಕಿದ್ದರೆ ಇದರಲ್ಲಿ ಸ್ವಲ್ಪ ತಾಜಾ ಕರಿಬೇವಿನ ಸೊಪ್ಪನ್ನು ಸಹ ಸೇರಿಸಿ. ನಂತರ ಅದನ್ನು ಕೈಗಳಿಂದ ಅಥವಾ ಮಿಕ್ಸರ್ನಲ್ಲಿ ಪುಡಿ ಮಾಡಿ ತೆಂಗಿನ ಎಣ್ಣೆಯಲ್ಲಿ ಮಿಶ್ರಣ ಮಾಡಿ ಹೇರ್ ಡೈ ತಯಾರಿಸಿ.
ತೆಂಗಿನ ಎಣ್ಣೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಸಿಪ್ಪೆಯ ಮಿಶ್ರಣವನ್ನು ಬೆರೆಸಿ ತಯಾರಿಸಿದ ಹೇರ್ ಡೈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿದರೆ ಒಂದೇ ನಿಮಿಷದಲ್ಲಿ ನಿಮ್ಮ ಬಿಳಿ ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ತರಕಾರಿ ಸಿಪ್ಪೆಗಳನ್ನು ಬಳಸಿ ಮನೆಯಲ್ಲೇ ತಯಾರಿಸಬಹುದಾದ ಈ ಹೇರ್ ಡೈಯನ್ನು ತಿಂಗಳಿಗೆ 2 ರಿಂದ 3 ಬಾರಿ ಹಚ್ಚುವುದರಿಂದ ನಿಮ್ಮ ಬೆಳ್ಳಗಾದ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. ಅಲ್ಲದೆ, ಇದು ಕೂದಲನ್ನು ಬೇರುಗಳಿಂದ ಗಟ್ಟಿಗೊಳಿಸಿ ಉದ್ದ, ದಪ್ಪ ಕೇಶರಾಶಿ ಹೊಂದಲು ಕೂಡ ನೆರವಾಗುತ್ತದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
