ಉದಯವಾಹಿನಿ , ಸೊಪ್ಪು ಅನ್ನೋದು ಭಾರತೀಯರ ಜೀವನಶೈಲಿಯಲ್ಲಿ ಮಹತ್ವದ ಪಾತ್ರ ವಹಿಸುತ್ತೆ. ಮನುಷ್ಯನ ದೇಹದಲ್ಲಿ ಪೋಷಕಾಂಶಗಳು ಹೆಚ್ಚಲು ಸೊಪ್ಪುಗಳು ತುಂಬಾನೆ ಸಹಕಾರಿಯಾಗಿ ಕೆಲಸ ಮಾಡುತ್ತದೆ. ಎಲ್ಲಾ ಸೊಪ್ಪುಗಳು ಅನೇಕ ಪೋಷಕಾಂಶಗಳನ್ನು ಹೊಂದಿವೆ. ಇವತ್ತು ನಾವು ನಿಮಗೆ ಒಂದು ಅತ್ಯದ್ಭುತವಾದ ಸೊಪ್ಪಿನ ರಹಸ್ಯಕಾರಿ ಉಪಯೋಗಗಳನ್ನು ತಿಳಿಸ್ತೀವಿ.

ನಮ್ಮ ದೇಶದಲ್ಲಿ ದಕ್ಷಿಣ ಭಾರತದಲ್ಲಿ ಯಾವುದೇ ಅಡುಗೆ ಮಾಡಿದ್ರೂ ಅದರಲ್ಲಿ ಹಸಿರು ತರಕಾರಿಗೆ ಮೊದಲ ಅದ್ಯತೆ ನೀಡುತ್ತಾರೆ. ರೊಟ್ಟಿ, ಉಪ್ಪಿಟ್ಟ, ಸಾಂಬಾರ್​ನಲ್ಲಿಯೂ ಸೊಪ್ಪು ಬಳಕೆ ಮಾಡಲಾಗುತ್ತದೆ. ಅಷ್ಟೇ ಏಕೆ ನಾನ್‌ವೆಜ್ ಅಡುಗೆಗಳನ್ನು ಮಾಡೋದಾದರೂ ಸಹಿ ಕನಿಷ್ಟ ಪಕ್ಷ ಕರಿಬೇವಿನ ಸೊಪ್ಪಾದರೂ ಬೇಕೇ ಬೇಕು. ಹೀಗಾಗಿ ಭಾರತೀಯರ ಅಡುಗೆಗಳು ಸೊಪ್ಪಿಲ್ಲದೆ ಪೂರ್ಣವಾಗೋದೇ ಇಲ್ಲ ಅನ್ನಬಹುದು. ಆದ್ರೆ ಇಂದು ನಾವು ಹೇಳುತ್ತಿರುವ ಸೊಪ್ಪು ಪುರುಷರಿಗೆ ತುಂಬಾನೇ ಉಪಯೋಗಕಾರಿ. ಇದನ್ನು ಉತ್ತರ ಭಾರತದಲ್ಲಿ ಕಲ್ಮಿ ಸೊಪ್ಪು ಎಂದು ಕರೆಯಲಾಗುತ್ತದೆ. ಇದೊಂದು ಪಾಲಕ್ ಜಾತಿಗೆ ಸೇರಿದ್ದು, ಹೆಚ್ಚು ನೀರಿನಾಂಶ ಹೊಂದಿರುತ್ತದೆ. ತಜ್ಞರ ಪ್ರಕಾರ, ಕಲ್ಮಿ ಶಾವು ಬೀಟಾ ಕ್ಯಾರೋಟಿನ್‌ನಲ್ಲಿ ಸಮೃದ್ಧವಾಗಿದೆ, ವಿಟಮಿನ್ ಸಿ ಸಮೃದ್ಧವಾಗಿದೆ ಇದು ದೇಹದಲ್ಲಿ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಸೊಪ್ಪನ್ನು ಪಲ್ಯವಾಗಿ ಮಾಡಲಾಗುತ್ತದೆ. ಇದರಿಂದ ಪುರುಷರಿಗೆ ಶಕ್ತಿ ಹೆಚ್ಚುತ್ತದೆಯಂತೆ.

ಕೆಲವರು ಕಲ್ಮಿ ಸೊಪ್ಪನ್ನು ಜ್ಯೂಸ್ ಮಾಡಿ ಕುಡಿಯುತ್ತಾರೆ. ಜ್ಯೂಸ್ ಇಷ್ಟವಾಗದವರು ಬದನೆಕಾಯಿ, ಆಲೂಗಡ್ಡೆ, ಸುವರ್ಣ ಗಡ್ಡೆ ಅಂತಹ ತರಕಾರಿ ಜೊತೆ ಮಿಕ್ಸ್ ಮಾಡಿ ಅಡುಗೆಗೆ ಬಳಸುತ್ತಾರೆ. ಈ ಸೊಪನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಒಲೆ ಮೇಲೆ ಪಾತ್ರೆ ಇಟ್ಕೊಂಡು ಎರಡು ಟೀ ಸ್ಪೂನ್ ಎಣ್ಣೆ ಹಾಕಿ, ಅದಕ್ಕಿ ಹಸಿಮೆಣಸಿನಕಾಯಿ ಪೇಸ್ಟ್, ಈರುಳ್ಳಿ, ಜಜ್ಜಿದ ಬೆಳ್ಳುಳ್ಳಿ ಹಾಕಿ ಮಿಕ್ಸ್ ಮಾಡಿ. ನಂತರ ಕತ್ತರಿಸಿದ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದ್ರೆ ಎರಡು ನಿಮಿಷ ಬೇಯಿಸಿದ್ರೆ ಕಲ್ಮಿ ಸೊಪ್ಪಿನ ಪಲ್ಯ ಸವಿಯಲು ಸಿದ್ಧವಾಗುತ್ತದೆ. ಕಲ್ಮಿ ಸೊಪ್ಪು ಅಂದ್ರೆ ಅನೇಕರು ನಗುತ್ತಾರೆ. ಹೆಚ್ಚು ತೇವಾಂಶ ಇರೋ ಸ್ಥಳದಲ್ಲಿ ಈ ಸೊಪ್ಪು ಬಳೆದಿರುತ್ತದೆ. ಹಾಗಾಗಿ ಈ ಸೊಪ್ಪು ತಿನ್ನಬೇಕಾ ಎಂದು ಕೆಲವರು ಪ್ರಶ್ನೆ ಕೇಳುತ್ತಾರೆ. ಆದರೆ ಈ ಸೊಪ್ಪು ಹೆಚ್ಚು ಪೋಷಕಾಂಶಗಳಿಂದ ಸಮೃದ್ಧವಾಗಿದೆ.

Leave a Reply

Your email address will not be published. Required fields are marked *

error: Content is protected !!