ಉದಯವಾಹಿನಿ, ಮುಂಬಯಿ: ಆರ್ ಸಿಬಿ (RCB) – ಮುಂಬೈ ಇಂಡಿಯನ್ಸ್ (MI) ನಡುವಿನ ರೋಚಕ ಕಾದಾಟದಲ್ಲಿ ಬೆಂಗಳೂರು ತಂಡ ಮೇಲುಗೈ ಸಾಧಿಸಿದೆ. ಆ
ಮೂಲಕ ವಾಂಖೆಡೆಯಲ್ಲಿನ ಸೋಲಿನ ಬರವನ್ನು ನೀಗಿಸಿದೆ. ವಿರಾಟ್ ಕೊಹ್ಲಿ ಮತ್ತು ನಾಯಕ ರಜತ್ ಪಾಟಿದಾರ್
ಅವರ ಅಮೋಘ ಬ್ಯಾಟಿಂಗ್ ಸಾಹಸದಿಂದ ಆರ್ ಸಿಬಿ 5 ವಿಕೆಟಿಗೆ 221 ರನ್ ಪೇರಿಸಿ ಸವಾಲೊಡ್ಡಿತು.ಗುರಿ ಬೆನ್ನಟ್ಟಿದ ಮುಂಬೈ 9 ವಿಕೆಟ್ ಕಳೆದುಕೊಂಡು 209 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ ಜಿದ್ದಾಜಿದ್ರಿನ ಐಪಿಎಲ್ ಪಂದ್ಯದಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ತಂಡದ ಎದುರು ರಾಯಲ್ ಚಾಲೆಂಜರ್ ಬೆಂಗಳೂರು ತಂಡ 12 ರನ್ ಗಳ ಜಯ ಸಾಧಿಸಿತು. ಆರ್ ಸಿಬಿ ಗೆ ಇದು 4ನೇ ಪಂದ್ಯದಲ್ಲಿ 3 ನೇ ಜಯ. ಅಂಕ ಪಟ್ಟಿಯಲ್ಲಿ 3 ನೇ ಸ್ಥಾನದಲ್ಲಿದೆ. ಮುಂಬೈ 5 ನೇ ಪಂದ್ಯದಲ್ಲಿ 4 ನೇ ಸೋಲು ಅನುಭವಿಸಿತು.
ಗೆಲುವಿನ ಖುಷಿಯಲ್ಲಿದ್ದ ಆರ್‌ಸಿಬಿ ಕ್ಯಾಪ್ಟನ್‌ಗೆ ಭಾರೀ ದಂಡವನ್ನು ವಿಧಿಸಲಾಗಿದೆ. ನಿಧಾನಗತಿಯ ಓವರ್ ರೇಟ್ ಕಾರಣದಿಂದ ರಜತ್ ಪಾಟಿದಾರ್‌ಗೆ 12 ಲಕ್ಷ ರೂ ದಂಡ ವಿಧಿಸಲಾಗಿದೆ.ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಅಡಿಯಲ್ಲಿ, ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ, ಪಾಟಿದಾರ್ ತಂಡದ ಈ ಋತುವಿನ ಮೊದಲ ಅಪರಾಧ ಇದಾಗಿರುವುದರಿಂದ, ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ” ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
