ಉದಯವಾಹಿನಿ,ಬೆಂಗಳೂರು: ಜಲ ಜಿವನ ಮಿಷನ್ ಯೋಜನೆಯಡಿ ಇಂಟಿಗ್ರೇಟೆಡ್ ವಾಟರ್ ರಿಸೋರ್ಸ್ ಮ್ಯಾನೇಜ್ಮೆಂಟ್ ಕನ್ಸಲ್‌ಟಂಟ್ ಹುದ್ದೆಯನ್ನು ಭರ್ತಿ ಮಾಡಲು ಇದೀಗ ಕರ್ನಾಟಕ ಆರ್‌ಡಿಪಿಆರ್ ಇಲಾಖೆ ನೇಮಕಾತಿ ಜಾಹೀರಾತು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ ಮಿಷನ್ ಯೋಜನೆಯಡಿ ರಾಜ್ಯ ಕಛೇರಿಗೆ UNICEF ಸಂಸ್ಥೆಯ ವತಿಯಿಂದ ಕೆಳಕಂಡ ತಾತ್ಕಾಲಿಕ ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ಸಮಾಲೋಚಕರನ್ನು ನೇಮಿಸಿಕೊಳ್ಳಲು ಅರ್ಜಿ ಕರೆಯಲಾಗಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ ಹಾಗೂ ಕಾರ್ಯಾನುಭವದ ವಿವರಗಳು ಕೆಳಗಿನಂತಿದೆ.
ಹುದ್ದೆ ಹೆಸರು : ಇಂಟಿಗ್ರೇಟೆಡ್ ವಾಟರ್ ರಿಸೋರ್ಸ್ ಮ್ಯಾನೇಜ್ಮೆಂಟ್ ಕನ್ಸಲ್‌ಟಂಟ್
ಹುದ್ದೆ ಸಂಖ್ಯೆ : 1
ಮಾಸಿಕ ಸಂಭಾವನೆ : ರೂ.60,000-70,000.
ವಿದ್ಯಾರ್ಹತೆ
– ವಾಟರ್ ರಿಸೋರ್ಸ್ ಮ್ಯಾನೇಜ್ಮೆಂಟ್ / ಸಿವಿಲ್ ಇಂಜಿನಿಯರಿಂಗ್ / ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ / ಪಬ್ಲಿಕ್ ಹೆಲ್ತ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
– ಇಂಟಿಗ್ರೇಟೆಡ್ ವಾಟರ್ ರಿಸೋರ್ಸ್ ಮ್ಯಾನೇಜ್ಮೆಂಟ್ ನಲ್ಲಿ ಕಾರ್ಯಾನುಭವ ಹೊಂದಿರಬೇಕು.
– ದೂರ ಶಿಕ್ಷಣ ವಿದ್ಯಾರ್ಹತೆಗಳು ಅಮಾನ್ಯ.
