ಉದಯವಾಹಿನಿ, ಚಿಕ್ಕಬಳ್ಳಾಪುರ : ತಂದೆಯ ಪಾಲನೆ ಪೋಷಣೆ ಮಾಡಬೇಕಾಗಿದ್ದ ಹೆತ್ತ ಮಕ್ಕಳೇ ಅವರನ್ನು ಮನೆಯಿಂದ ಹೊರಗೆ ಹಾಕಿದ್ದರು. ಉಪವಿಭಾಗಾಧಿಕಾರಿಗಳ ನ್ಯಾಯಾಲಯದ ತೀರ್ಪಿನಂತೆ ತಹಶೀಲ್ದಾರ್ ಅನಿಲ್ ರವರು ಅನಾಗರೀಕವಾಗಿ ವರ್ತಿಸಿ ತಂದೆಯನ್ನು ಹೊರಗೆ ಹಾಕಿದ್ದ ಮಕ್ಕಳಿಗೆ ಬುದ್ದಿವಾದ ಹೇಳಿ ವೆಂಕಟರೋಣಪ್ಪ ಅವರನ್ನು ಮನೆಗೆ ಬಿಟ್ಟ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.
ನಗರದ ಶಾಂತಿನಗರ ವಾರ್ಡ್-೨೧ರಲ್ಲಿ ವಾಸವಾಗಿರುವ ವೆಂಕಟರೋಣಪ್ಪ ಬಿನ್ ವೆಂಕಟಸ್ವಾಮಿ ಎಂಬ ೭೨ ವರ್ಷದ ಹಿರಿಯ ನಾಗರೀಕರನ್ನು ಹೆತ್ತ ಮಕ್ಕಳೇ ಮನೆಯಿಂದ ಹೊರಗೆ ತಳ್ಳಿ ಅಮಾನವೀಯವಾಗಿ ನಡೆದುಕೊಂಡ ಕಾರಣ ಅವರು ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಕೇಸು ಹಾಕಿದ್ದರು.

ನ್ಯಾಯಾಲಯದ ತೀರ್ಪು ತಂದೆಯ ಪರ ಬಂದಿದ್ದು, ಮಾಹೆಯಾನ ರೂ ೫ ಸಾವಿರ ಪೋಷಣಾ ಭತ್ಯೆ,ನಕ್ಕಲಕುಂಟೆ ಮನೆಯನ್ನು ತಂದೆಗೆ ಬಿಟ್ಟುಕೊಡಬೇಕು.ಆರೋಗ್ಯ ಸಮಸ್ಯೆ ಎದುರಾದಾಗ ಡಿಹೆಚ್‌ಒ ಚಿಕಿತ್ಸೆ ನೀಡಬೇಕು ಎಂದು ಆದೇಶ ನೀಡಿದ್ದಾರೆ.
ಉಪವಿಭಾಗಾಧಿಕಾರಿಗಳ ನ್ಯಾಯಾಲಯದ ಆದೇಶದನ್ವಯ ತಹಶೀಲ್ದಾರ್ ಅನಿಲ್,ನಗರಸಭೆ ಸಹಾಯಕ ಪರಿಸರ ಅಭಿಯಂತರ ಉಮಾಶಂಕರ್, ನಗರ ಠಾಣಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಮರ್, ಮತ್ತು ಸಂತ್ರಸ್ಥರ ಪರ ವಕೀಲರಾದ ಮಂಜುನಾಥರೆಡ್ಡಿ, ಗಂಗರಾಜು ಕತ್ರಿಗುಪ್ಪೆ, ಸಂತ್ರಸ್ಥರನ್ನು ಮನೆಗೆ ಸೇರಿಸಿ,ಮಕ್ಕಳಿಗೆ ಬುದ್ದಿವಾದ ಹೇಳಿದ್ದಾರೆ.
ಏನಿದು ಪ್ರಕರಣ?: ಚಿಕ್ಕಬಳ್ಳಾಪುರ ನಗರದ ನಕ್ಕಲಕುಂಟೆ ಪುರಸಭಾ ನಿವೇಶನ ಸಂಖ್ಯೆ-೧೧೯ರಲ್ಲಿ ನಿರ್ಮಿಸಲಾಗಿರುವ ಮನೆಯನ್ನು ವೆಂಕಟರೋಣಪ್ಪ ಬಿನ್ ಲೇಟ್ ವೆಂಕಟಸ್ವಾಮಿ ಅವರ ಮಕ್ಕಳಾದ ಸುಬ್ಬಲಕ್ಷ್ಮಮ್ಮ ಕೋಂ ವೆಂಕಟೇಶಪ್ಪ ಇವರು ಆತಿಕ್ರಮಿಸಿಕೊಂಡು ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ.ನನಗೆ ವಯಸ್ಸಾಗಿರುವುದರಿಂದ ದುಡಿಯಲು ಅಶಕ್ತನಾಗಿದ್ದೇನೆ.ಮನೆಯನ್ನು ಬಿಡಿಸಿಕೊಟ್ಟು ಜೀವನಾಂಶಕ್ಕೆ ಆದೇಶ ನೀಡಬೇಕು ಎಂದು ತಂದೆ-ತಾಯಿಯರ ಮತ್ತು ಹಿರಿಯ ನಾಗರೀಕರ ಪೋಷಣೆ ಮತ್ತು ಶ್ರೇಯೋಭಿವೃದ್ಧಿ ಹಾಗೂ ಸಂರಕ್ಷಣಾ ಕಾಯ್ದೆ ೨೦೦೭ರಡಿ ಮೇಲ್ಮನವಿ ಸಲ್ಲಿಸಿದ್ದರು.

Leave a Reply

Your email address will not be published. Required fields are marked *

error: Content is protected !!