ಉದಯವಾಹಿನಿ, ಢಾಕಾ: ಪದಚ್ಯುತ ಪ್ರಧಾನಿ ಶೇಕ್ ಹಸೀನಾ, ಅವರ ಸಹೋದರಿ ಶೇಕ್ ರೆಹನಾ, ಬ್ರಿಟಿಷ್ ಸಂಸದ ತುಲಿಪ್ ರಿಜ್ಞಾನಾ ಸಿದ್ಧಿಕ್ ಹಾಗೂ ಇತರ 50 ಮಂದಿಯ ವಿರುದ್ಧ ಬಾಂಗ್ಲಾದೇಶ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ.ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಭೂಮಿ ಸ್ವಾಧೀನಪಡಿಸಿಕೊಂಡ ಆರೋಪದಡಿಯಲ್ಲಿ ಭ್ರಷ್ಟಾಚಾರ ನಿಗ್ರಹ ಆಯೋಗ (ಎಸಿಸಿ) ಸಲ್ಲಿಸಿದ್ದ ಮೂರು ಪ್ರತ್ಯೇಕ ದೋಷಾರೋಪ ಪಟ್ಟಿಗಳನ್ನು ಪರಿಗಣಿಸಿ ಮೆಟ್ರೋಪಾಲಿಟನ್ ಹಿರಿಯ ವಿಶೇಷ ನ್ಯಾಯಾಧೀಶ ಝಾಕಿರ್ ಹುಸೇನ್ ಅವರು ಈ ಆದೇಶ ಹೊರಡಿಸಿದ್ದಾರೆ ಎಂದು ‘ಢಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ. ಬಂಧನ ಆದೇಶಗಳ ಜಾರಿಗೆ ಸಂಬಂಧಿಸಿದ ವರದಿಗಳ ಪರಿಶೀಲನೆಯನ್ನು ಏಪ್ರಿಲ್ 27ಕ್ಕೆ ನಿಗದಿಪಡಿಸಲಾಗಿದೆ ಎಂದು ಎಸಿಸಿ ಸಹಾಯಕ ನಿರ್ದೇಶಕ ಅಮಿನುಲ್ ಇಸ್ಲಾಂ ಅವರು ತಿಳಿಸಿರುವುದಾಗಿಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬಂಧನ ಆದೇಶಗಳ ಅನುಷ್ಠಾನದ ಕುರಿತ ವರದಿಗಳನ್ನು ಪರಿಶೀಲಿಸಲು ನ್ಯಾಯಾಧೀಶ ಹೊಸೇನ್ ಏಪ್ರಿಲ್ 27 ಅನ್ನು ನಿಗದಿಪಡಿಸಿದ್ದಾರೆ ಎಂದು ಎಸಿಸಿ ಸಹಾಯಕ ನಿರ್ದೇಶಕ (ಪ್ರಾಸಿಕ್ಯೂಷನ್) ಅಮಿನುಲ್ ಇಸ್ಲಾಂ ತಿಳಿಸಿರುವುದಾಗಿಯೂ ವರದಿಯಲ್ಲಿದೆ.
