ಉದಯವಾಹಿನಿ, ಸುಮಿ, ಉಕ್ರೇನ್. ಉಕ್ರೇನ್ನ ಈಶಾನ್ಯ ಭಾಗದ ಪ್ರಮುಖ ನಗರವಾದ ‘ಸುಮಿ’ ಮೇಲೆ ರಷ್ಯಾ ಪಡೆಗಳು ಭಾನುವಾರ ಖಂಡಾಂತರ ಕ್ಷಿಪಣಿ ದಾಳಿ ಮಾಡಿವೆ. ರಷ್ಯಾ ಗಡಿ ಸಮೀಪ ಇರುವ ಸುಮಿ ನಗರದ ಹೃದಯ ಭಾಗದಲ್ಲೇ ಈ ಭೀಕರ ದಾಳಿ ನಡೆದಿದ್ದು, ಪರಿಣಾಮವಾಗಿ ಮಹಿಳೆಯರು, ಮಕ್ಕಳು ಸೇರಿ 32 ಜನ ಮೃತಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಷ್ಯಾ ಉಕ್ರೇನ್ ಮೇಲೆ ನಡೆಸಿದ ಅತಿದೊಡ್ಡ ದಾಳಿ ಇದಾಗಿದೆ. ಸಾವು ನೋವಿನ ಸಂಖ್ಯೆ ಹೆಚ್ಚಾಗಬಹುದು ಎಂದು ವರದಿಗಳು ಹೇಳಿವೆ. ಉಕ್ರೇನ್ನಲ್ಲಿ ಪಾಮ್ ಸಂಡೇಯ ಸಂಭ್ರಮಾಚರಣೆ ನಡೆಯುತ್ತಿದ್ದ ವೇಳೆಯೇ ಈ ಭೀಕರ ದಾಳಿಯಾಗಿದ್ದು ಉಕ್ರೇನಿಗರನ್ನು ಕೆರಳುವಂತೆ ಮಾಡಿದೆ. ದಾಳಿಯ ಬಗ್ಗೆ, ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ಝಲೆನ್‌ “Only bastards do this” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಷ್ಯಾದ ಈ ದಾಳಿಯನ್ನು ಯುರೋಪ್ ಸೇರಿದಂತೆ ಅನೇಕ ಜಾಗತಿಕ ನಾಯಕರು ಖಂಡಿಸಿದ್ದಾರೆ. ಮಹಿಳೆ, ಮಕ್ಕಳನ್ನು ಅಮಾಯಕರನ್ನು ಕೊಲ್ಲುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!