ಉದಯವಾಹಿನಿ, ಉಡುಪಿ: ಕರಾವಳಿಯಲ್ಲಿ ಬಿಸಿಲ ಬೇಗೆ ಹೆಚ್ಚುತ್ತಿದ್ದಂತೆ ಜಲ ಮೂಲಗಳೆಲ್ಲವೂ ಬತ್ತುತ್ತಿವೆ. ಇದರಿಂದ ಮನುಷ್ಯರಂತೆ ಪಕ್ಷಿಗಳು ಕೂಡ ನೀರಿನ ದಾಹದಿಂದ ಚಡಪಡಿಸುತ್ತಿವೆ.ಇತ್ತೀಚಿನ ದಿನಗಳಲ್ಲಿ ಪಕ್ಷಿಗಳಿಗೆ ನೀರಿಡುವ ಪ್ರವೃತ್ತಿ ನಗರ ಪ್ರದೇಶದ ಜನರಲ್ಲಿ ಜಾಸ್ತಿ ಆಗುತ್ತಿದ್ದರೂ ಬಹುತೇಕರು ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಬಿಸಿಲಿನ ಧಗೆ ಹೆಚ್ಚಾದಾಗ ದೇಹದ ಉಷ್ಣಾಂಶ ಕಡಿಮೆ ಮಾಡಲು ಮತ್ತು ದಾಹ ನೀಗಿಸಿಕೊಳ್ಳಲು ಪಕ್ಷಿಗಳು ನೀರಿನಾಸರೆಯನ್ನು ಅರಸುತ್ತವೆ.ಇಂತಹ ಸಂದರ್ಭದಲ್ಲಿ ಮನೆಗಳ ಹೂದೋಟದಲ್ಲಿ ತಾರಸಿಗಳ ಮೇಲೆ ಪಾತ್ರೆಯಲ್ಲಿ ನೀರಿಟ್ಟರೆ ಅವುಗಳಿಗೆ ಆಸರೆಯಾಗುತ್ತದೆ. ನಗರ ಪ್ರದೇಶದಲ್ಲಿ ಹೆಚ್ಚು, ಮರ, ಗಿಡಗಳಿರುವ ಪ್ರದೇಶದಲ್ಲಿ ಬೇಸಿಗೆ ಕಾಲದಲ್ಲಿ ನಗರ ಸಭೆಯವರು ಸಣ್ಣ ಸಣ್ಣ ಪಾತ್ರೆಗಳಲ್ಲಿ ನೀರು ಇಡುವ ಮೂಲಕ ಪಕ್ಷಿಗಳ ನೀರಡಿಕೆ ನೀಗಿಸಲು ಮುಂದಾಗಬೇಕು ಎನ್ನುತ್ತಾರೆ ಪಕ್ಷಿ ಪ್ರೇಮಿಗಳು.
ಬುಲ್‌ಬುಲ್, ಕೆಂಬೂತ, ಗೋಲ್ಡನ್ ಒರಿಯೋಲ್, ಬಾರ್ಬೆಟ್, ಮುನಿಯ ಮೊದಲಾದ ಹಕ್ಕಿಗಳು ಸಾಮಾನ್ಯವಾಗಿ ಮನೆಗಳ ಪರಿಸರದಲ್ಲಿ ಕಂಡು ಬರುತ್ತವೆ. ನಗರ ಪ್ರದೇಶದಲ್ಲೂ ಇವುಗಳು ಸಾಮಾನ್ಯವಾಗಿವೆ. ಮನೆಯ ತಾರಸಿಯಲ್ಲಿ ನೀರಿಟ್ಟರೆ ಇವುಗಳು ಅದರಲ್ಲಿ ಸ್ನಾನ ಮಾಡುವ ಮೂಲಕ ಧಗೆ ನೀಗಿಸಿಕೊಳ್ಳುತ್ತವೆ. ‘ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದ ಜನರಲ್ಲಿ ಜಾಗೃತಿ ಮೂಡಿದೆ. ಈ
ಕಾರಣಕ್ಕೆ ಹೆಚ್ಚಿನ ಮನೆಯವರು ಬೇಸಿಗೆ ಕಾಲದಲ್ಲಿ ಹಕ್ಕಿಗಳಿಗೆ ನೀರಿಡುತ್ತಾರೆ. ಪಕ್ಷಿಗಳಿಗೆ ನೀರಿಡುವವರು ಹೆಚ್ಚು ಆಳವಿಲ್ಲದ ಪಾತ್ರೆಗಳಲ್ಲಿ ನೀರಿಡಬೇಕು. ಆಳವಿದ್ದರೆ ಅವುಗಳು ಹೆದರಿ ಅದರ ಬಳಿ ಬರುವುದಿಲ್ಲ ಎನ್ನುತ್ತಾರೆ ಕುಂದಾಪುರದ ಬಂಡಾರ್ಕಸ್್ರ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗೂ ಪಕ್ಷಿತಜ್ಞ ವಿ.
ಲಕ್ಷ್ಮೀನಾರಾಯಣ ಉಪಾಧ್ಯ
ಗಾಢ ಬಣ್ಣದ ಪಾತ್ರೆಗಳು ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸಬಾರದು ಅವುಗಳನ್ನು ನೋಡಿದರೆ ಪಕ್ಷಿಗಳು ಹೆದರಿ ಸಮೀಪಕ್ಕೆ ಬರುವುದಿಲ್ಲ.
