ಉದಯವಾಹಿನಿ, ಪಿಥೋರಗಡ್‌: ಆದಿ ಕೈಲಾಸ ಯಾತ್ರೆ ನಿನ್ನೆಯಿಂದ ಆರಂಭವಾಗಿದ್ದು, ಮೊದಲ ದಿನ ಮೊದಲ ದಿನ ಯಾತ್ರಾರ್ಥಿಗಳ ಮೊದಲ ತಂಡ ಶಿಖರದ ದರ್ಶನಕ್ಕೆ ಆಗಮಿಸಿದೆ. ಶಿಖರದಿಂದ ಸುಮಾರು ಎರಡು ಕಿ.ಮೀ ದೂರದಲ್ಲಿರುವ ಶಿವ-ಪಾರ್ವತಿಗೆ ಸಮರ್ಪಿತವಾದ ದೇವಾಲಯವನ್ನು ರಂಗ್‌ ಸಮುದಾಯವು ನಡೆಸಿದ ಆಚರಣೆಗಳ ನಡುವೆ ಮಧ್ಯಾಹ್ನ 12 ಗಂಟೆಗೆ ಭಕ್ತರಿಗೆ ತೆರೆಯಲಾಯಿತು. ದೇವಾಲಯದ ಗೇಟ್‌ ತೆರೆಯುತ್ತಿದ್ದಂತೆ 150 ರಂಗ್‌ ಗ್ರಾಮಸ್ಥರು ಸೇರಿದಂತೆ 200 ಕ್ಕೂ ಹೆಚ್ಚು ಭಕ್ತರು ಹಾಜರಿದ್ದರು ಎಂದು ಉತ್ತರಾಖಂಡದ ಪಿಥೋರಗಢ ಪಟ್ಟಣದ ಭಕ್ತ ಕಾರ್ತಿಕ್‌ ಭಾಟಿಯಾ ಹೇಳಿದ್ದಾರೆ.
ವ್ಯಾಸ್‌‍ ಕಣಿವೆಯ ಕುಟಿ ಗ್ರಾಮದ ಅರ್ಚಕರಾದ ಗೋಪಾಲ್‌ ಸಿಂಗ್‌ ಕುಟಿಯಾಲ್‌ ಮತ್ತು ವೀರೇಂದ್ರ ಸಿಂಗ್‌ ಕುಟಿಯಾಲ್‌ ಅವರು ರಂಗ್‌ ಬುಡಕಟ್ಟು ಆಚರಣೆಗಳ ಪ್ರಕಾರ ದೇವಾಲಯವನ್ನು ತೆರೆದಿದ್ದಾರೆ ಎಂದು ಧಾರ್ಚುಲಾ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ (ಎಸ್ಡಿಎಂ) ಮಂಜಿತ್‌ ಸಿಂಗ್‌ ತಿಳಿಸಿದ್ದಾರೆ.

ಪುರೋಹಿತರು ತಮ್ಮ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿದ್ದರೆ, ವ್ಯಾಸ್‌‍ ಕಣಿವೆಯ ಇತರ ರಂಗ್‌ ಹಳ್ಳಿಗಳ ಜನರು ಶಿವ ಮತ್ತು ಪಾರ್ವತಿಯನ್ನು ಸ್ತುತಿಸುವ ಜಾನಪದ ಗೀತೆಗಳನ್ನು ಹಾಡಿದರು. ವ್ಯಾಸ್‌‍ ಕಣಿವೆಯ ಎಲ್ಲಾ ಆರು ಹಳ್ಳಿಗಳ ಜನರು ಸೇರಿದಂತೆ 1,500 ಕ್ಕೂ ಹೆಚ್ಚು ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!