ಉದಯವಾಹಿನಿ, ಬೆಂಗಳೂರು: ಜಿಬಿಎ 5 ಪಾಲಿಕೆಯಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಸಚಿವ ಕೆ.ಜೆ ಜಾರ್ಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಜಿಬಿಎ ಚುನಾವಣೆ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಜಿಬಿಎ ಚುನಾವಣೆಗೆ ಕಾಂಗ್ರೆಸ್ ಪಕ್ಷ ಎಲ್ಲಾ ಸಿದ್ಧತೆಯನ್ನ ಮಾಡಿಕೊಂಡಿದೆ. ಸುಪ್ರೀಂ ಆದೇಶದಂತೆ ನಾವು ಚುನಾವಣೆ ನಡೆಸುತ್ತೇವೆ. ಐದಕ್ಕೆ ಐದು ಗೆಲ್ಲುವ ವಿಶ್ವಾಸ ನಮ್ಮಲ್ಲಿ ಇದೆ. ಬಿಜೆಪಿ, ಜೆಡಿಎಸ್ ಯಾವಾಗಲೂ ಮೈತ್ರಿ ಇತ್ತು. ನಮಗೆ ಇದೇನು ಹೊಸದಲ್ಲ. ಈ ಹಿಂದೆಯೂ ಅವರು ಹೊಂದಾಣಿಕೆಯಲ್ಲಿ ಇದ್ದರು. ಅವರು ಮೈತ್ರಿ ಆದರೆ ನಮಗೇನು ತೊಂದರೆ ಇಲ್ಲ ಎಂದಿದ್ದಾರೆ.
ಸಿದ್ದರಾಮಯ್ಯಲೀಸ್ ಬೇಸ್ ಸಿಎಂ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ಕೊಟ್ಟ ಜಾರ್ಜ್, ಕುಮಾರಸ್ವಾಮಿ ಹೇಳಿದ್ದಕ್ಕೆಲ್ಲ ನಾವು ಮಾತಾಡೋಕೆ ಆಗಲ್ಲ. ಅವರು ಲೀಸ್ ಬೇಸ್ಡ್ ಸಿಎಂ ಆಗಿದ್ರು. ಐದು ವರ್ಷಕ್ಕೆಂದು ಸಿಎಂ ಆಗಿ ಒಂದು ವರ್ಷಕ್ಕೆ ಹೋದ್ರು. ಬಿಜೆಪಿಯಲ್ಲಿ ಎಲ್ಲಾ ಸಿಎಂಗೆ ಅದೇ ಅನುಭವ ಆಗಿದೆ. ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಹೀಗಾಗಲ್ಲ ಎಂದು ತಿಳಿಸಿದ್ದಾರೆ.
ಸಿಎಂ-ಡಿಸಿಎಂ ರಾಹುಲ್ ಗಾಂಧಿ ಭೇಟಿ ಮಾಡ್ತಿರೋ ವಿಚಾರಕ್ಕೆ, ಸಿಎಂ, ಡಿಸಿಎಂ ಭೇಟಿ ಮಾಡೋದು ಅವರನ್ನೇ ಕೇಳಬೇಕು. ಏರ್‌ಪೋರ್ಟ್‌ನಲ್ಲಿ ಕ್ಯಾಬಿನೆಟ್ ರಿಶಪಲ್ ಬಗ್ಗೆ ಮಾತಾಡ್ತಾರಾ? ಏರ್‌ಪೋರ್ಟ್‌ನಲ್ಲಿ ಅದೆಲ್ಲಾ ಮಾತಾಡ್ತಾರಾ? ಎಂದಿದ್ದಾರೆ.
