ಉದಯವಾಹಿನಿ, ಇಸ್ಲಾಮಾಬಾದ್‌ : ಒಂದು ವೇಳೆ ಭಾರತದ ವಿರುದ್ದ ಪಾಕಿಸ್ತಾನ ಯುದ್ದ ಮಾಡಿದರೆ, ನೀವು ನಮ ದೇಶದ ಪರವಾಗಿ ನಿಲ್ಲುತ್ತೀರಾ ಎಂದು ಇಸ್ಲಾಮಾಬಾದ್‌ನ ಲಾಲ್‌ ಮಸೀದಿಯ ವಿವಾದಾತಕ ಧರ್ಮ ಗುರು ಮೌಲಾನಾ ಅಬ್ದುಲ್‌ ಅಜೀಜ್‌ ಘಾಜಿ ಅವರು ಪ್ರೇಕ್ಷಕರನ್ನು ಕೇಳಿದಾಗ ಒಬ್ಬೇ ಒಬ್ಬರೂ ಕೂಡಾ ಕೈ ಎತ್ತದೆ ಮುಜುಗರಕ್ಕೆ ಸಿಲುಕಿಸಿರುವ ಘಟನೆ ನಡೆದಿದೆ. ಸಾಮಾಜಿಕ ಜಾಲ ತಾಣದಲ್ಲಿ ಇದು ಈಗ ಭಾರೀ ವೈರಲ್‌ ಆಗಿದ್ದು, ಪಾಪಿ ಪಾಕಿಸ್ತಾನಕ್ಕೆ ತನ್ನ ನೆಲದಲ್ಲೇ ಬೆಂಬಲ ಇಲ್ಲ ಎಂದು ನೆಟ್ಟಿಗರು ಕಿಚಾಯಿಸುತ್ತಿದ್ದಾರೆ.
ಲಾಲ್‌ ಮಸೀದಿಯಲ್ಲಿ ವಿದ್ಯಾರ್ಥಿಗಳು ಮತ್ತು ಅನುಯಾಯಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ನನಗೊಂದು ಪ್ರಶ್ನೆಯಿದೆ. ಪಾಕಿಸ್ತಾನವು ಭಾರತದ ವಿರುದ್ಧ ಹೋರಾಡಿದರೆ, ನಿಮಲ್ಲಿ ಎಷ್ಟು ಮಂದಿ ಪಾಕಿಸ್ತಾನವನ್ನು ಬೆಂಬಲಿಸುತ್ತೀರಿ ಮತ್ತು ಅದಕ್ಕಾಗಿ ಹೋರಾಡುತ್ತೀರಿ? ಎಂದು ಕೇಳಿದಾಗ ಯಾರೂ ಕೂಡಾ ಕೈ ಎತ್ತದೆ ಮೌನಕ್ಕೆ ಶರಣಾಗಿದ್ದಾರೆ.
ಉಗ್ರವಾದ ಮತ್ತು ರಾಜ್ಯ ಘರ್ಷಣೆಗೆ ಸಂಬಂಧಿಸಿದಂತೆ ಘಾಜಿ ಪಾಕಿಸ್ತಾನದ ಸ್ಥಾಪನೆಯನ್ನು ಟೀಕಿಸಲು ಮುಂದಾದರು, ಇಂದು ಪಾಕಿಸ್ತಾನದಲ್ಲಿ ಅಪನಂಬಿಕೆಯ ವ್ಯವಸ್ಥೆ ಇದೆ – ಕ್ರೂರ, ಅನುಪಯುಕ್ತ ವ್ಯವಸ್ಥೆ. ಇದು ಭಾರತಕ್ಕಿಂತ ಕೆಟ್ಟದಾಗಿದೆ.ಬಲೂಚಿಸ್ತಾನ ಮತ್ತು ಖೈಬರ್‌ ಪಖ್ತುಂಖ್ವಾದಲ್ಲಿನ ದೌರ್ಜನ್ಯಗಳನ್ನು ಉಲ್ಲೇಖಿಸಿದ ಧರ್ಮಗುರು, ಪಾಕಿಸ್ತಾನಿ ರಾಜ್ಯವು ತನ್ನದೇ ಜನರ ಮೇಲೆ ಬಾಂಬ್‌ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದರು.
ಬಲೂಚಿಸ್ತಾನದಲ್ಲಿ ಏನಾಯಿತು, ಅವರು ಪಾಕಿಸ್ತಾನದಲ್ಲಿ ಮತ್ತು ಖೈಬರ್‌ ಪಖ್ತುಂಖ್ವಾದಲ್ಲಿ ಏನು ಮಾಡಿದರು – ಇವುಗಳು ದೌರ್ಜನ್ಯಗಳು. ಜನರು ಸಿದ್ಧರಾದಾಗ, ರಾಜ್ಯವು ತನ್ನ ಸ್ವಂತ ನಾಗರಿಕರ ಮೇಲೆ ಬಾಂಬ್‌ ಸ್ಫೋಟಿಸಿತು.ಮೇ 2 ರಂದು ಜಾಮಿಯಾ ಹಫ್ಸಾ ಮತ್ತು ಲಾಲ್‌ ಮಸೀದಿಯಲ್ಲಿ ರೆಕಾರ್ಡ್‌ ಮಾಡಲಾದ ವೀಡಿಯೊ ಪಾಕಿಸ್ತಾನದ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.

Leave a Reply

Your email address will not be published. Required fields are marked *

error: Content is protected !!