ಉದಯವಾಹಿನಿ,ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ತಕ್ಷಣವೇ ಸಿಎಂ ಸಿದ್ಧರಾಮಯ್ಯ ಇಂದಿರಾ ಕ್ಯಾಂಟೀನ್ ಗಳನ್ನು ಪುನರಾರಂಭಿಸಿದ್ದರು. ಈ ಬೆನ್ನಲ್ಲೇ ಈಗ ಪುಡ್ ಮೆನು ಕೂಡ ಬದಲಾವಣೆಗೊಂಡಿದ್ದು, ಹಸಿದವರ ಹೊಟ್ಟೆಯನ್ನು ತುಂಬಿಸುವ ಸಲುವಾಗಿ ಶುಚಿ-ರುಚಿಯ ಆಹಾರವನ್ನು ಇನ್ಮುಂದೆ ನೀಡಲಾಗುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯಾಧ್ಯಂತ ಇಂದಿರಾ ಕ್ಯಾಂಟೀನ್ ಗಳ ಮೂಲಕ ಬಡವರು, ಮಧ್ಯಮ ವರ್ಗದವರಿಗೆ ಗುಣಮಟ್ಟದ ಆಹಾರದ ಜೊತೆಗೆ, ಶುಚಿ, ರುಚಿಯ ಊಟವನ್ನು ಉಣಬಡಿಸಲಾಗುತ್ತಿದೆ. ಈಗ ಇಂದಿರಾ ಕ್ಯಾಂಟೀನ್ ಪ್ರಿಯರಿಗೆ ಗುಡ್ ನ್ಯೂಸ್ ಎನ್ನುವಂತೆ ಇದುವರೆಗಿನ ಊಟದ ಮೆನು ಕೂಡ ಬದಲಾವಣೆ ಮಾಡಲಾಗಿದೆ. ಇನ್ಮುಂದೆ ಬೆಳಿಗ್ಗೆ ಇಂದಿರಾ ಕ್ಯಾಂಟಿನ್ ಗಳಲ್ಲಿ ಉಪಹಾರದಲ್ಲಿ ಬ್ರೆಡ್, ಜಾಮ್, ಮಂಗಳೂರು ಬನ್ಸ್ ಕೂಡ ನೀಡಲು ನಿರ್ಧರಿಸಿದೆ. ಇದಲ್ಲದೇ ಮಧ್ಯಾಹ್ನದ ಊಟದ ವೇಳೆ ಪಾಯ, ಮುದ್ದೆ, ಸೊಪ್ಪಿನ ಸಾಂಬಾರ್ ಕೂಡ ನೀಡಲು ಮೆನುವಿನಲ್ಲಿ ಆಡ್ ಮಾಡಲಾಗಿದೆ.
ಇನ್ನೂ ಸೋಮವಾರದಿಂದ ಶುಕ್ರವಾರದವರೆಗಿನ ಇಂದಿರಾ ಕ್ಯಾಂಟೀನ್ ಮೆನುವಿನಲ್ಲಿ ಊಟಕ್ಕೆ ಪಾಯಸ ಅಥವಾ ಒಂದು ಸಿಹಿ ತಿನಿಸು ನೀಡಲು ಮೆನುವಿನಲ್ಲಿ ಸೇರಿಸಲಾಗಿದೆ. ಇದಲ್ಲದೇ ಒಂದು ದಿನ ಬಿಟ್ಟು ಒಂದು ದಿನ ಮುದ್ದೆ ಊಟ, ಮುದ್ದೆ ಊಟ ಇಲ್ಲದ ದಿನ ಚಪಾತಿ, ಸಾಗು ನೀಡಲು ನಿರ್ಧರಿಸಲಾಗಿದೆ. ಇಂದಿರಾ ಕ್ಯಾಂಟೀನ್ ನೂತನ ಮೆನು ಮತ್ತು ದರಪಟ್ಟಿ: ಬೆಳಿಗ್ಗೆ – ಮೂರು ಇಡ್ಲಿ ಜೊತೆಗೆ ಸಾಂಬಾರ್ ರೂ.5 ಎರಡು ಬ್ರೆಡ್, ಜಾಮ್ ರೂ.5 ಒಂದು ಮಂಗಳೂರು ಬನ್ಸ್ ರೂ.5 ಟಿ ಅಥವಾ ಕಾಫಿ ರೂ.5 ವೆಜ್ ಪಲಾವ್, ಟೊಮ್ಯಾಟೋ ಬಾತ್ ರೂ.5 ಖಾರಾ ಪೊಂಗಲ್ ಜೊತೆಗೆ ಚಟ್ನಿ ರೂ.5 ಬಿಸಿಬೇಳೆ ಬಾತ್ ರೂ.5 ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಅನ್ನ, ತರಕಾರಿ ಸಾಂಬಾರ್ ರೂ.10. ಎರಡು ರಾಗಿ ಮುದ್ದೆ ಜೊತೆಗೆ ಸೊಪ್ಪಿನ ಸಾರು ರೂ.10. ಎರಡು ಚಪಾತಿ ಜೊತೆಗೆ ಪಲ್ಯ ರೂ.10 ಹೀಗೆ ನಾನಾ ರೀತಿಯ ತಿನಿಸುಗಳು ಕಡಿಮೆ ಬೆಲೆಯಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ದೊರೆಯಲಿದೆ.
