ಉದಯವಾಹಿನಿ, ಬಾಗೇಪಲ್ಲಿ: ಕಾರ್ಗಿಲ್ ವಿಜಯ ದಿನಕ್ಕೆ 26ನೇ ವರ್ಷದ ಸಂಭ್ರಮ. ಭಾರತೀಯ ಸೇನೆಯ ಶೌರ್ಯ, ಸಾಹಸಗಾಥೆ ಎಂದೆಂದಿಗೂ ಪ್ರೇರಣಾದಾಯಕ, ಭಾರತದ ವೀರಯೋಧರ ತ್ಯಾಗ ಮತ್ತು ಬಲಿದಾನ ಸ್ಮರಿಸುವ ಜೊತೆಗೆ ಕಾರ್ಗಿಲ್ ವೀರ ಮರಣ ಹೊಂದಿದ ಯೋಧ ಬಿ.ಎ. ರಫೀವುಲ್ಲಾ ನಮನ ಗಳನ್ನು ಸಲ್ಲಸುತ್ತಿದ್ದವೆ ಎಂದು ಭಾರತೀಯ ನಿವೃತ್ತ ಯೋಧ ಅಮರನಾಥ್ ಬಾಬು ತಿಳಿಸಿದರು.ಪಟ್ಟಣದ ಡಿ.ಸಿ.ಸಿ.ಬ್ಯಾಂಕ್ ಮುಂದೆ ಕಾರ್ಗಿಲ್ ವೀರ ಅಮರ ಯೋಧ ಬಿ.ಎ.ರಫೀವುಲ್ಲಾ ವಿವಿಧ ಮುಖಂಡರು ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಅಪ್ರತಿಮ ಶೌರ್ಯ, ದೇಶಭಕ್ತಿಯ ಸ್ಫೂರ್ತಿಯೊಂದಿಗೆ ದೇಶದ ಶತ್ರುಗಳನ್ನು ಸದೆಬಡಿದು, ಭಾರತಾಂಬೆಯ ಘನತೆ, ಗೌರವವನ್ನು ಮುಗಿಲೆತ್ತರಕ್ಕೆ ಹಾರಿಸಿ ಅಮರರಾದ ಕಾರ್ಗಿಲ್ ಯುದ್ಧದ ವೀರ ಹುತಾತ್ಮ ಯೋಧರಿಗೆ “ಕಾರ್ಗಿಲ್ ವಿಜಯ ದಿನ” ದಂದು ಗೌರವ ನಮನಗಳೊಂದಿಗೆ ಆಚರಿಸುತ್ತಿದ್ದವೆ ಎಂದು ಹೇಳಿದರು.
