ಉದಯವಾಹಿನಿ, ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಯಾವ ಆಹಾರ ತಿನ್ನಬೇಕು, ಯಾವುದನ್ನು ತಪ್ಪಿಸಬೇಕು ಎಂಬ ಕನ್ನೂಷನ್ ಹಲವರಿಗೆ ಇರುತ್ತೆ. ವಿಶೇಷವಾಗಿ ಪೀನಟ್ ಬಟರ್ ತಿನ್ನಬಹುದಾ? ತಿಂದರೆ ತೂಕ ಕಡಿಮೆಯಾಗುತ್ತಾ? ಎನ್ನುವ ಸಂಶಯ ಕೂಡ ಕೆಲವರಿಗೆ ಇರುತ್ತದೆ. ವಾಸ್ತವವಾಗಿ ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಪೀನಟ್ ಬಟರ್ ಕೂಡ ವೆಯಿಟ್ ಲಾಸ್ ಪ್ರಯಾಣದಲ್ಲಿ ಸಹಾಯಕವಾಗಬಹುದು.
ಪೀನಟ್ ಬಟರ್‌ನಲ್ಲಿ ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳು ಸಾಕಷ್ಟು ಇರುತ್ತವೆ. ಈ ಪೋಷಕಾಂಶಗಳು ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಹೊಟ್ಟೆ ತುಂಬಿದ ಭಾವನೆ ಹೆಚ್ಚು ಸಮಯ ಇರಲು ಸಹಾಯ ಮಾಡುತ್ತವೆ.
ತೂಕ ಇಳಿಸಿಕೊಳ್ಳುವ ವೇಳೆ ಅನಗತ್ಯವಾಗಿ ಮತ್ತೆ ಮತ್ತೆ ಹಸಿವಾಗುವುದು ಸಾಮಾನ್ಯ. ಪೀನಟ್ ಬಟರ್‌ನಲ್ಲಿರುವ ಪ್ರೋಟೀನ್ ಮತ್ತು ಫ್ಯಾಟ್‌ಗಳು ಹೊಟ್ಟೆ ತುಂಬಿದ ಭಾವನೆ ನೀಡುವುದರಿಂದ ಹೆಚ್ಚು ತಿಂಡಿ ತಿನ್ನುವ ಅಭ್ಯಾಸ ಕಡಿಮೆ ಆಗಬಹುದು.
