ಉದಯವಾಹಿನಿ, ಹಪ್ಪಳವನ್ನು ಕೆಲವರು ಬಹಳ ಇಷ್ಟ ಪಟ್ಟು ತಿಂದರೆ, ಇನ್ನೂ ಕೆಲವರು ಹಬ್ಬಳ ಕಂಡ ತಕ್ಷಣ ಮಾರುದ್ದ ಓಡಿ ಹೋಗುವವರು ಇದ್ದಾರೆ. ಹಪ್ಪಳವನ್ನು ಇಷ್ಟ ಪಡದೇ ಇರುವುದಕ್ಕೆ ಒಂದು ಕಾರಣನೂ ಇದೆ. ಅದೇನೆಂದರೆ ಅನೇಕ ಜನರು ಹಪ್ಪಳವನ್ನು ಎಣ್ಣೆಯಲ್ಲಿ ಹುರಿಯುವುದರಿಂದ ಬರುವ ಕೊಬ್ಬು ಮತ್ತು ಕ್ಯಾಲೊರಿಗಳ ಬಗ್ಗೆ ಚಿಂತಿತರಾಗಿದ್ದಾರೆ. ಆದ್ರೆ ಹೆಚ್ಚು ಎಣ್ಣೆ ಉಪಯೋಗಿಸದೇ ಕೂಡಾ ಗರಿಗರಿಯಾದ ಹಪ್ಪಳವನ್ನು ರೆಡಿ ಮಾಡಬಹುದು. ಇದಕ್ಕಾಗಿ, ಕೇವಲ ಒಂದು ಲೋಟ ನೀರು ಮತ್ತು ಅಗಲವಾದ ಪ್ಯಾನ್ ಸಾಕು. ನೀರನ್ನು ಕುದಿಸಿ, ಬಳಿಕ ಬಿಸಿ ಪ್ಯಾನ್ ಮೇಲೆ ಉಪ್ಪನ್ನು ಬಿಸಿ ಮಾಡಿ, ಅದರಲ್ಲಿ ಅಪ್ಪಡಗಳನ್ನು ಹುರಿಯುವ ಮೂಲಕ ನೀವು ಎಣ್ಣೆ ರಹಿತ ಹಪ್ಪಳವನ್ನು ತಯಾರಿಸಬಹುದು.

ಸಾಮಾನ್ಯವಾಗಿ ಅನೇಕರಿಗೆ ಊಟ ಮಾಡುವಾಗ ಪಕ್ಕದಲ್ಲಿ ಗರಿಗರಿಯಾದ ಹಪ್ಪಳವಿದ್ದರೆ ಮಾತ್ರ ಊಟ ಸೇರುತ್ತದೆ. ಆದಾಗ್ಯೂ, ಅನೇಕ ಜನರು ಇಷ್ಟ ಇದ್ದರೂ ಕೂಡಾ, ಎಣ್ಣೆಯ ಸಲುವಾಗಿ ಹಪ್ಪಳವನ್ನು ದೂರವಿಡುತ್ತಾರೆ. ಏಕೆಂದರೆ ಅವು ಎಣ್ಣೆಯಲ್ಲಿ ಹುರಿಯುವುದರಿಂದ ಅವು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು. ಬೆಂಕಿಯಲ್ಲಿ ಹುರಿದರೆ, ಅವು ಸರಿಯಾಗಿ ಬೇಯಿಸುವುದಿಲ್ಲ ಮತ್ತು ಅಷ್ಟೊಂದು ರುಚಿ ಕೂಡಾ ಸಿಗೋದಿಲ್ಲ. ಹೀಗಾಗಿ ಹಪ್ಪಳ ಪ್ರಿಯರಿಗೆ ಇಲ್ಲಿದೆ ಸಿಂಪಲ್ ಟ್ರಿಕ್ಸ್ಎಣ್ಣೆ ಇಲ್ಲದೆ ಕೂಡಾ ಎಣ್ಣೆಯಲ್ಲಿ ಹುರಿದ ಅಥವಾ ಬೆಂಕಿಯಲ್ಲಿ ಹುರಿದ ರುಚಿಯೊಂದಿಗೆ ಹಪ್ಪಳಗಳನ್ನು ಹೇಗೆ ತಯಾರಿಸುವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ .
ಅಗಲವಾದ ಕಡಾಯಿಯಲ್ಲಿ ಸಾಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬಿಸಿ ಮಾಡಿ. ಉಪ್ಪು ಸಾಕಷ್ಟು ಬಿಸಿಯಾದ ನಂತರ, ಅದರಲ್ಲಿ ಹಪ್ಪಳವನ್ನು ಹಾಕಿ ಹಿಂದಕ್ಕೆ ಮತ್ತು ಮುಂದಕ್ಕೆ ತಿರುಗಿಸಿ. ಕೆಲವು ಸೆಕೆಂಡುಗಳಲ್ಲಿ, ಹಪ್ಪಳಗಳು ಎಣ್ಣೆಯಲ್ಲಿ ಹುರಿದಂತೆ ಬಿಳಿ ಮತ್ತು ಗರಿಗರಿಯಾಗುತ್ತವೆ.

Leave a Reply

Your email address will not be published. Required fields are marked *

error: Content is protected !!