ಉದಯವಾಹಿನಿ, ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ನಗರದ ಜನರು ಜನನಿಬಿಡ ರಸ್ತೆಯಲ್ಲಿ ಅನಿರೀಕ್ಷಿತ ಪ್ರತಿಮೆಯೊಂದನ್ನು ನೋಡಿ ಅಚ್ಚರಿಗೊಳಗಾಗಿದ್ದಾರೆ. ಮ್ಯಾನ್‌ಹ್ಯಾಟನ್‌ನ ಜನನಿಬಿಡ ರಸ್ತೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ಪ್ರಕಾಶಮಾನವಾದ ಕೆಂಪು ಪ್ರತಿಮೆ ಮ್ಯಾನ್‌ಹೋಲ್‌ನಿಂದ ಎದ್ದು ಬಂದು ನಿಂತಂತೆ ಕಂಡುಬಂದಿತು. ಡೊನಾಲ್ಡ್ ಎಂಬ ಹೆಸರಿನಲ್ಲಿ ಅಮೆರಿಕ ಅಧ್ಯಕ್ಷರ ಕೆಂಪು ಬಣ್ಣದ ಪ್ರತಿಮೆಯನ್ನು ಫ್ರೆಂಚ್ ಬೀದಿ ಕಲಾವಿದ ಜೇಮ್ಸ್ ಕೊಲೊಮಿನಾ ಅವರು ರಹಸ್ಯವಾಗಿ ಸ್ಥಾಪಿಸಿದರು. ಇದು ಟ್ರಂಪ್ ಟವರ್‌ನಿಂದ ಸರಿಸುಮಾರು ಒಂದು ಮೈಲಿ ದೂರದಲ್ಲಿರುವ ಪೂರ್ವ 42ನೇ ಬೀದಿ ಮತ್ತು 2 ನೇ ಅವೆನ್ಯೂದ ಕಾರ್ನರ್‌ನಲ್ಲಿ ಸ್ಥಾಪಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಪೂರ್ವ ಸೂಚನೆ ಇಲ್ಲದೆ ಇರಿಸಲಾಗುವ, ಕೆಂಪು ಶಿಲ್ಪಗಳಿಗೆ ಹೆಸರುವಾಸಿಯಾದ ಕೊಲೊಮಿನಾ ಅವರು ಶಿಲ್ಪವನ್ನು ಆಯ್ಕೆಮಾಡಿದ ಸ್ಥಳವು ಉದ್ದೇಶಪೂರ್ವಕವಾಗಿತ್ತು ಎಂದು ತಿಳಿಸಿದರು. ತಾನುನು ಈ ಶಿಲ್ಪವನ್ನು ನ್ಯೂಯಾರ್ಕ್‌ನಲ್ಲಿ ಸ್ಥಾಪಿಸಿದ್ದೇನೆ, ಏಕೆಂದರೆ ಇಲ್ಲಿಯೇ ಟ್ರಂಪ್ ತನ್ನ ಸಾಮ್ರಾಜ್ಯವನ್ನು, ತನ್ನ ಕತೆಗಳನ್ನು ನಿರ್ಮಿಸಿಕೊಂಡರು ಎಂದು ಹೇಳಿದರು.

ರಾಳದಿಂದ ಮಾಡಲ್ಪಟ್ಟ ಈ ಪ್ರಕಾಶಮಾನವಾದ ಕೆಂಪು ಶಿಲ್ಪವು ಟ್ರಂಪ್ ಅವರನ್ನು ಸೊಂಟದಿಂದ ಮೇಲಕ್ಕೆ, ಮ್ಯಾನ್‌ಹೋಲ್‌ನಿಂದ ಹೊರಬರುತ್ತಿರುವಂತೆ ಚಿತ್ರಿಸಿದೆ. ಇದು ಶಿಲ್ಪದ ಒಂದು ಭಾಗವೂ ಆಗಿದೆ. ಸೂಟ್ ಮತ್ತು ಟೈ ಧರಿಸಿದ ಈ ಟ್ರಂಪ್ ಪ್ರತಿಮೆಯು ಗಂಭೀರ ನೋಟ ಮತ್ತು ಗಗನಚುಂಬಿ ಕಟ್ಟಡವನ್ನು ನೋಡುತ್ತಿರುವಂತೆ ಚಿತ್ರಿಸಲಾಗಿದೆ. ಮ್ಯಾನ್‌ಹೋಲ್ ಕವರ್ ಮುಚ್ಚಳದ ಕೆಳಗೆ, ಒಂದು ಸಣ್ಣ ಕೆಂಪು ಇಲಿ ಹೊರಕ್ಕೆ ಇಣುಕುವಂತಿರುವ ಪುಟ್ಟ ಪ್ರತಿಮೆಯೂ ಇದೆ.

Leave a Reply

Your email address will not be published. Required fields are marked *

error: Content is protected !!