ಉದಯವಾಹಿನಿ, ಬಹುತೇಕರು ಹಲವು ಪಲ್ಯಗಳ ಜೊತೆಗೆ ಸಾಂಬಾರ್ ಇಲ್ಲವೇ ರಸಂ ತಯಾರಿಸುತ್ತಾರೆ. ಅನೇಕರು ಹಸಿಮೆಣಸಿನಕಾಯಿ ರಸಂ, ಶುಂಠಿ ರಸಂ ಹಾಗೂ ಟೊಮೆಟೊ ರಸಂ ಸೇವಿಸುತ್ತಾರೆ. ಪ್ರತಿ ಬಾರಿಯು ಒಂದೇ ಪ್ರಕಾರ ರಸಂ ತಿನ್ನಲು ಬೇಸರವಾಗುತ್ತದೆ. ನಿಮ್ಮ ನಾಲಿಗೆಯು ಹೊಸ ರುಚಿಯ ರಸಂ ಬಯಸುತ್ತದೆ.ಸಾಮಾನ್ಯವಾಗಿ ತಯಾರಿಸುವ ರಸಂ ರುಚಿಗಿಂತ ವಿಭಿನ್ನವಾಗಿ ಈ ಹೊಸ ಶೈಲಿಯಲ್ಲಿ ರಸಂ ಮಾಡಿ. ಇದರ ರುಚಿ ಸೂಪರ್ ಆಗಿರುತ್ತದೆ. ಅದುವೇ ಚಳಿಗಾಲಕ್ಕೆ ಹೇಳಿ ಮಾಡಿಸಿದ ಮೈಸೂರು ರಸಂ ರೆಸಿಪಿಯಿದೆ. ಇದನ್ನು ಬಿಸಿ ಅನ್ನದ ಜೊತೆಗೆ ಸ್ವಲ್ಪ ತುಪ್ಪ ಹಾಕಿಕೊಂಡು ತಿಂದರೆ ರುಚಿ ಅದ್ಭುತವಾಗಿರುತ್ತದೆ. ಮೈಸೂರು ರಸಂ ಈ ರೀತಿ ಸಿದ್ಧಪಡಿಸಿದರೆ ಮತ್ತೆ ಎರಡು ತುತ್ತು ರೈಸ್ ಅನ್ನು ಹೆಚ್ಚು ತಿನ್ನಲು ಇಷ್ಟಪಡುತ್ತೀರಿ. ಇದೀಗ ಸಖತ್ ಟೇಸ್ಟಿಯಾದ ಮೈಸೂರು ರಸಂ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ಮೈಸೂರು ರಸಂ ಬೇಕಾಗುವ ಸಾಮಗ್ರಿಗಳು: ತೊಗರಿಬೇಳೆ – 4 ಟೀಸ್ಪೂನ್, ಎಣ್ಣೆ – 2 ಟೀಸ್ಪೂನ್, ಒಣ ಕೆಂಪು ಮೆಣಸಿನಕಾಯಿ – 3
ಕಡಲೆಬೇಳೆ – 1 ಟೀಸ್ಪೂನ್, ಕಾಳುಮೆಣಸು – ಅರ್ಧ ಟೀಸ್ಪೂನ್ , ಧನಿಯಾ ಪುಡಿ – 2 ಟೀಸ್ಪೂನ್, ಜೀರಿಗೆ – 1 ಟೀಸ್ಪೂನ್
ತೆಂಗಿನಕಾಯಿ ತುರಿ – 3 ಟೀಸ್ಪೂನ್, ಟೊಮೆಟೊ – 3, ಉಪ್ಪು – ರುಚಿಗೆ ತಕ್ಕಷ್ಟು, ತುರಿದ ಬೆಲ್ಲ – ಒಂದೂವರೆ ಟೀಸ್ಪೂನ್
ಅರಿಶಿನ – ಅರ್ಧ ಟೀಸ್ಪೂನ್, ಕರಿಬೇವು – ಸ್ವಲ್ಪ, ಹುಣಸೆಹಣ್ಣು – 20 ಗ್ರಾಂ, ಹಸಿಮೆಣಸಿನಕಾಯಿ – 2
ಕೊತ್ತಂಬರಿ ಸೊಪ್ಪು – ಸ್ವಲ್ಪ, ತುಪ್ಪ – 2 ಟೀಸ್ಪೂನ್ , ಸಾಸಿವೆ – 1 ಟೀಸ್ಪೂನ್, ಇಂಗು – 2 ಚಿಟಿಕೆ
