ಉದಯವಾಹಿನಿ, ಕಾರವಾರ: ಶಿರೂರು ಭೂಕುಸಿತ ದುರಂತ ಬಗ್ಗೆ ಮಾಲೆಯಾಳಂನಲ್ಲಿ ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಕೇರಳದ ಶಾಸಕ ಅಶ್ರಫ್ ಅವರು ಸಿನಿಮಾ ಕಥೆ ಬರೆಯುತ್ತಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಜುಲೈನಲ್ಲಿ ಅಂಕೋಲದ ಶಿರೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೂಕುಸಿತವಾಗಿ 11 ಜನ ಮೃತಪಟ್ಟರು. ಈವರೆಗೂ ಜಗನ್ನಾಥ, ಲೋಕೇಶ್ ಶವಗಳು ದೊರೆತಿಲ್ಲ. ಕೇರಳದ ಚಾಲಕ ಅರ್ಜುನ್ ಮೃತದೇಹ ಹುಡುಕಲು ಮೂರು ತಿಂಗಳಕಾಲ ಅವಿರತ ಕಾರ್ಯಾಚರಣೆ ನಡೆದು ಕೊನೆಗೆ ಆತನ ಶವವನ್ನು ಮಾತ್ರ ಹೊರತೆಗೆಯಲಾಯಿತು.
ಆತನು ಬದುಕಿ ಬರಲೆಂದು ಕೇರಳದ ಜನತೆ ಪ್ರಾರ್ಥನೆ ಮಾಡಿದ್ದರು. ಇದೀಗ ಶಿರೂರು ಘಟನೆ ನಡೆದು ಒಂದು ವರ್ಷವಾದ ಬೆನ್ನಲ್ಲೇ ಈ ದುರಂತ ಘಟನೆ ಕೇರಳದ ಮಲೆಯಾಳಂ ಭಾಷೆಯಲ್ಲಿ ಸಿನಿಮಾ ಸಟ್ಟೇರಲು ಸಿದ್ಧವಾಗಿದೆ. ಶಿರೂರು ದುರಂತ ಕಥೆಯನ್ನು ಬರೆಯುತ್ತಿರುವ ಕೇರಳದ ಶಾಸಕ ಅಶ್ರಫ್, ‘ಪಬ್ಲಿಕ್ ಟಿವಿ’ ಜೊತೆ ಸಿನಿಮಾ ನಿರ್ಮಾಣದ ಬಗ್ಗೆ ಹಂಚಿಕೊಂಡಿದ್ದಾರೆ.
