ಉದಯವಾಹಿನಿ, ಬೆಂಗಳೂರು: ನಗರದಲ್ಲಿ ಪಾಲಿಕೆ ಆಸ್ತಿಯಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಿದಂತ ಜನರಿಗೆ ಬಿಗ್ ಶಾಕ್ ನೀಡಲಾಗಿದೆ. ಇಂದು ಕೂಡ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಪರೇಷನ್ ಬುಲ್ಡೋಜರ್ ಸದ್ದು ಮಾಡಿದ್ದು, ದೊಡ್ಡಕಲ್ಲಸಂದ್ರ ಗ್ರಾಮದಲ್ಲಿ ಸುಮಾರು 50 ಕೋಟಿ ಮೌಲ್ಯದ ಆಸ್ತಿಯನ್ನು ಪಾಲಿಕೆಯು ವಶಪಡಿಸಿಕೊಂಡಿದೆ. ಈ ಕುರಿತಂತೆ ಬಿಬಿಎಂಪಿಯಿಂದ ಮಾಹಿತಿ ನೀಡಲಾಗಿದ್ದು, ನಗರದ ಬೊಮ್ಮನಹಳ್ಳಿ ವಲಯ ಬೆಂಗಳೂರು ದಕ್ಷಿಣ ವಿಭಾಗದ ವಾರ್ಡ್ ನಂ.197 ರ ವ್ಯಾಪ್ತಿಯ ನಾರಾಯಣ ನಗರ 1ನೇ ಹಂತದ ದೊಡ್ಡಕಲ್ಲಸಂದ್ರ ಗ್ರಾಮದ ಸರ್ವೆ ನಂಬರ್ 79/5ಎ ರಲ್ಲಿ ಆಟದ ಮೈದಾನಕ್ಕೆಂದು ಗುರುತಿಸಿ ಮೀಸಲಿಟ್ಟಿದ್ದ ಜಾಗದ ಬಗ್ಗೆ ಶ್ರೀಮತಿ ಜಗದಾಂಬ ಮತ್ತು ಇತರರು OS No.6521/2014 ರಲ್ಲಿ ಪ್ರಕರಣವನ್ನು ಮಾನ್ಯ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ದಾಖಲಿಸಿದ್ದು, ಸದರಿ ಪ್ರಕರಣವು ದಿನಾಂಕ: 17.04.2023 ರಂದು ಮಾನ್ಯ ನ್ಯಾಯಾಲಯವು ವಜಾಗೊಳಿಸಿರುತ್ತದೆ ಎಂದಿದೆ. ಅದರಂತೆ, ದಿನಾಂಕ: 21.06.2023 ರಂದು ಪಾಲಿಕೆ ವತಿಯಿಂದ ಮಾನ್ಯ ವಲಯ ಆಯುಕ್ತರಾದ ಡಾ. ಹರೀಶ್ ಕುಮಾರ್ ಹಾಗೂ ಮಾನ್ಯ ಜಂಟಿ ಆಯುಕ್ತರಾದ ಶ್ರೀ ಕೃಷ್ಣಮೂರ್ತಿ ರವರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಕೈಗೊಂಡು ಸುಮಾರು 50,000 ಚದರ ಅಡಿಗಳ(ಆಸ್ತಿ ಮೌಲ್ಯ ಸುಮಾರು 50 ಕೋಟಿ ರೂ.ಗಳ) ಸ್ವತ್ತನ್ನು ಪಾಲಿಕೆ ವಶಕ್ಕೆ ಪಡೆಯಲಾಗಿರುತ್ತದೆ ಎಂದು ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!