ಉದಯವಾಹಿನಿ, ಮುಂಬೈ: ಮಾಲೆಗಾಂವ್ ಸ್ಫೋಟ ಪ್ರಕರಣ ನನ್ನ ಜೀವನವನ್ನೇ ಹಾಳು ಮಾಡಿದೆ ಎಂದು ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಹೇಳಿದ್ದಾರೆ. ಎನ್‌ಐಎ ವಿಶೇಷ ನ್ಯಾಯಾಲಯ ಆರೋಪಗಳಿಂದ ಖುಲಾಸೆಗೊಳಿಸಿದ ಬಳಿಕ ಅವರು ಪ್ರತಿಕ್ರಿಯೆ ನೀಡಿದರು.
ತೀರ್ಪು ಪ್ರಕಟವಾದಾಗ ಅವರು ನ್ಯಾಯಾಲಯದಲ್ಲಿದ್ದರು. ಈ ವೇಳೆ, ನ್ಯಾಯಾಲಯವನ್ನು ಉದ್ದೇಶಿಸಿ, ಈ ಹಿಂದೆ ತನಿಖೆಗಾಗಿ ನನ್ನನ್ನು ಕರೆಸಿ, ಬಂಧಿಸಿ, ಚಿತ್ರಹಿಂಸೆ ನೀಡಲಾಯಿತು. ಇದರಿಂದ ನನ್ನ ಇಡೀ ಜೀವನವೇ ಹಾಳಾಯ್ತು. ನಾನು ಸಾಧ್ವಿ ಜೀವನವನ್ನು ನಡೆಸುತ್ತಿದ್ದೆ. ಆದರೆ ನನ್ನನ್ನು ಆರೋಪಿಯನ್ನಾಗಿ ಮಾಡಲಾಯಿತು. ಪಿತೂರಿಯಿಂದ ಕೇಸರಿಯನ್ನೂ ದೂಷಿಸಿದರು. ಇಂದು ಕೇಸರಿ, ಹಿಂದುತ್ವ ಗೆದ್ದಿದೆ. ತಪ್ಪಿತಸ್ಥರನ್ನು ದೇವರು ಶಿಕ್ಷಿಸುತ್ತಾನೆ. ನಾನು ಸನ್ಯಾಸಿಯಾಗಿರುವುದರಿಂದ ನಾನು ಜೀವಂತವಾಗಿದ್ದೇನೆ ಎಂದರು.
ಈ ಹಿಂದೆ ಪ್ರಕರಣದಲ್ಲಿ ನನ್ನನ್ನು ಬಂಧಿಸಿ ಚಿತ್ರಹಿಂಸೆ ನೀಡಲಾಗಿದೆ ಎಂದು ಅವರು ಆರೋಪಿಸಿದ್ದರು. ಈ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು 2014 ರಲ್ಲಿ ತನಿಖೆಗೆ ಆದೇಶಿಸಿತ್ತು. ಆದರೆ ಅವರ ಆರೋಪಗಳನ್ನು ಸಾಭೀತುಪಡಿಸಲು ಯಾವುದೇ ಪುರಾವೆಗಳು ಸಿಕ್ಕಿರಲಿಲ್ಲ.
