ಉದಯವಾಹಿನಿ, ಲಂಡನ್: ಅಂತಾರಾಷ್ಟ್ರೀಯ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಹೇಳಿ ವಿಶ್ರಾಂತಿಯಲ್ಲಿರುವ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸದ್ಯ ಕುಟುಂಬ ಸಮೇತ ಲಂಡನ್‌ನಲ್ಲಿ ನಲೆಸಿದ್ದಾರೆ. ಇತ್ತೀಚೆಗೆ ಲಂಡನ್‌ನಲ್ಲಿ ಅಭಿಮಾನಿಯೊಬ್ಬರ ಜತೆ ವಿರಾಟ್ ಕೊಹ್ಲಿ ಇರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಿಳಿ ಗಡ್ಡಧಾರಿಯಾಗಿ ಕಾಣಿಸಿಕೊಂಡರು. ಇತ್ತೀಚೆಗಷ್ಟೇ ಕೊಹ್ಲಿ ಪ್ರತಿ ನಾಲ್ಕು ದಿನಗಳಿಗೊಮ್ಮೆ ನಿಮ್ಮ ಗಡ್ಡಕ್ಕೆ ಬಣ್ಣ ಬಳಿಯುವ ಸಮಯ ಬಂದಿದೆ ಎಂದು ಹೇಳಿದ್ದರು. ಇದೀಗ ಅವರು ಬಣ್ಣ ಬಳಿಯದೇ ಕಾಣಿಸಿಕೊಂಡ ಲುಕ್ ನೋಡಿ ಅವರ ಅಭಿಮಾನಿಗಳು ಒಂದು ಕ್ಷಣ ದಂಗಾಗಿದ್ದಾರೆ. ಗುರುತೇ ಸಿಗದ ರೀತಿಯಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದಾರೆ.
ಕೊಹ್ಲಿಯ ಫೋಟೊ ಕಂಡ ನೆಟ್ಟಿಗರೊಬ್ಬರು, “ಬಿಳಿ ಗಡ್ಡ, ಮಸುಕಾದ ಮತ್ತು ದಣಿದ ಕಣ್ಣುಗಳು. ಕಿಂಗ್(ರಾಜ) ತನ್ನ ಕತ್ತಿಯನ್ನು ತ್ಯಜಿಸಲು ಪ್ರಾರಂಭಿಸಿದ್ದಾನೆ. ನಾವು ಎಂದಿಗೂ ನೋಡಲು ಬಯಸದ ಅಂತ್ಯವನ್ನು ತಲುಪಿದ್ದೇವೆ!” ಎಂದು ಕಮೆಂಟ್ ಮಾಡಿದ್ದಾರೆ. ವಿರಾಟ್ ಸದ್ಯ ಸೇಂಟ್ ಜಾನ್ಸ್ ವುಡ್ ವಸತಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಸುಳಿವು ನೀಡಿದ್ದಾರೆ. ವಾಯುವ್ಯ ಲಂಡನ್‌ನಲ್ಲಿರುವ ಈ ಪ್ರದೇಶವು ಸುಂದರವಾದ ಮನೆಗಳಿಗೆ ಹೆಸರುವಾಸಿಯಾಗಿದೆ. ವಿರಾಟ್ ಕೊಹ್ಲಿ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸದ ಏಕದಿನ ಕ್ರಿಕೆಟ್ ಸರಣಿ ವೇಳೆ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ಇತ್ತೀಚೆಗೆ ನಡೆದ ‘ಆ್ಯಂಡರ್ಸನ್–ತೆಂಡೂಲ್ಕರ್ ಟ್ರೋಫಿ’ ಟೆಸ್ಟ್ ಸರಣಿಯಲ್ಲಿ ವಿರಾಟ್ ಹಾಗೂ ರೋಹಿತ್ ಅನುಪಸ್ಥಿತಿಯಲ್ಲಿ ಅಮೋಘ ಪ್ರದರ್ಶನ ತೋರಿತ್ತು. ಇಂಗ್ಲೆಂಡ್‌ನಲ್ಲಿ ನಡೆದ ಐದು ಪಂದ್ಯಗಳ ಸರಣಿಯಲ್ಲಿ ಸಮಬಲದ ಹೋರಾಟ ನಡೆಸಿ 2–2 ಅಂತರದಲ್ಲಿ ಸಮ ಮಾಡಿಕೊಂಡಿತ್ತು. ಹೀಗಾಗಿ ವಿರಾಟ್ ಮತ್ತು ರೋಹಿತ್ 2027ರ ಏಕದಿನ ವಿಶ್ವಕಪ್‌ಗೆ ಆಯ್ಕೆಯಾಗುವುದು ಅನುಮಾನ ಎನ್ನಲಾಗಿದೆ. ಅಲ್ಲದೆ ವಿಶ್ವಕಪ್ ವೇಳೆ ಉಭಯ ಆಟಗಾರರ ವಯಸ್ಸು 40ರ ಆಸುಪಾಸಿನಲ್ಲಿರಲಿದೆ.
