ಉದಯವಾಹಿನಿ, ನವದೆಹಲಿ: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಐದು ಪಂದ್ಯಗಳ ಆಷಸ್‌ ಟ್ರೋಫಿ (Ashes Trophy) ಟೆಸ್ಟ್‌ ಸರಣಿ ನವೆಂಬರ್‌21 ರಂದು ಆರಂಭವಾಗಲಿದೆ. ಈ ಟೆಸ್ಟ್‌ ಸರಣಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಆಷಸ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಈ ಬಾರಿ ಯಾವ ತಂಡ ಪ್ರಶಸ್ತಿ ಗೆಲ್ಲಲಿದೆ ಎಂದು ಆಸೀಸ್‌ ಬೌಲಿಂಗ್‌ ಗ್ಲೆನ್‌ ಮೆಗ್ರಾಥ್‌ (Glenn McGrath) ಭವಿಷ್ಯ ನುಡಿದಿದ್ದಾರೆ. ಆತಿಥೇಯ ಆಸ್ಟ್ರೇಲಿಯಾ ತಂಡ ಈ ಟೆಸ್ಟ್‌ ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಳ್ಳಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2013-14ರಲ್ಲಿ ಆಸ್ಟ್ರೇಲಿಯಾ ಎಲ್ಲಾ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಆಷಸ್‌ ಟ್ರೋಫಿಯನ್ನು ಗೆದ್ದಿತ್ತು. 2011ರ ಬಳಿಕ ಇಲ್ಲಿಯವರೆಗೂ ಆಸ್ಟ್ರೇಲಿಯಾದಲ್ಲಿ ಇಂಗ್ಲೆಡ್‌ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿಯೂ ಇದೇ ಫಲಿತಾಂಶ ಮೂಡಿ ಬರಲಿದೆ ಎಂದು ಗ್ಲೆನ್‌ ಮೆಗ್ರಾಥ್‌ ಭವಿಷ್ಯ ನುಡಿದಿದ್ದಾರೆ. ಆಷಸ್‌ ಟೆಸ್ಟ್‌ ಸರಣಿಯು ನವೆಂಬರ್‌, ಡಿಸೆಂಬರ್‌ ಹಾಗೂ ಜನವರಿಯಲ್ಲಿ ನಡೆಯಲಿದೆ.
ಆಷಸ್‌ ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿರುವ (157 ವಿಕೆಟ್‌ಗಳ) ಗ್ಲೆನ್‌ ಮೆಗ್ರಾಥ್‌, ಈ ಬಾರಿಯೂ ಆಸ್ಟ್ರೇಲಿಯಾ ತಂಡ ಸರಣಿಯನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನು ಹೊಂದಿದ್ದಾರೆ. “ನಾನು ಭವಿಷ್ಯ ನಿಡಿಯುವುದು ಬಹಳಾ ಅಪರೂಪ ಅಲ್ಲವೇ? ಬೇರೆಯವರ ರೀತಿ ನಾನು ವಿಭಿನ್ನವಾಗಿ ಮಾಡಲು ಸಾಧ್ಯವಿಲ್ಲ. 5-0 ಅಂತರದಲ್ಲಿ ಟೆಸ್ಟ್‌ ಸರಣಿಯಲ್ಲಿ ಫಲಿತಾಂಶ ಮೂಡಿಬರಲಿದೆ,” ಎಂದು ಹೇಳಿದ್ದಾರೆ ಮೆಗ್ರಾಥ್.‌ “ನಮ್ಮ ತಂಡದ ಬಗ್ಗೆ ನನಗೆ ತುಂಬಾ ವಿಶ್ವಾಸವಿದೆ. ನಿಮ್ಮ ಬೌಲಿಂಗ್‌ ವಿಭಾಗದಲ್ಲಿ ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಜಾಶ್‌ ಹೇಝಲ್‌ವುಡ್‌ ಹಾಗೂ ನೇಥನ್‌ ಲಯಾನ್‌ ಅವರು ತವರು ಕಂಡೀಷನ್ಸ್‌ನಲ್ಲಿ ಮಿಂಚಲಿದ್ದಾರೆ. ಇವರನ್ನು ಎದುರಿಸುವುದು ತುಂಬಾನೆ ಕಷ್ಟ. ಇನ್ನೊಂದ ಪ್ರಮುಖ ಸಂಗತಿ ಏನೆಂದರೆ, ಇಲ್ಲಿ ಇಂಗ್ಲೆಂಡ್‌ ತಂಡದ ದಾಖಲೆಗಳು ಉತ್ತವಾಗಿಲ್ಲ. ಈ ಬಾರಿಯಾದರೂ ಇಂಗ್ಲೆಂಡ್‌ ತಂಡ ಒಂದೇ ಒಂದು ಪಂದ್ಯವನ್ನು ಗೆಲ್ಲಲಿದೆಯಾ ಎಂದು ಕಾದು ನೋಡಬೇಕಾಗಿದೆ,” ಎಂದು ಗ್ಲೆನ್‌ ಮೆಗ್ರಾಥ್‌ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!