ಉದಯವಾಹಿನಿ, ಸಿಡ್ನಿ: ಆಸ್ಟ್ರೇಲಿಯಾದ ಬೊಂಡಿ ಬೀಚ್‌ನಲ್ಲಿ ಯಹೂದಿಗಳ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿ 16 ಜನರನ್ನು ಕೊಂದ ಇಬ್ಬರು ಬಂದೂಕುಧಾರಿಗಳು ತಂದೆ ಮತ್ತು ಮಗ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬೆನ್ನಲ್ಲೇ ಇಬ್ಬರೂ ಭಾರತೀಯ ಮೂಲದವರೇ ಅನ್ನೋದು ಬೆಳಕಿಗೆ ಬಂದಿದೆ. ಈಗಾಗಲೇ 50 ವರ್ಷದ ಸಾಜಿದ್ ಅಕ್ರಮ್ ಎಂಬಾತನನ್ನು ಪೊಲೀಸರು ಹತ್ಯೆ ಮಾಡಿದ್ದಾರೆ. ಆತನ 24 ವರ್ಷದ ಮಗ ನವೀದ್ ಅಕ್ರಮ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಸ್ಟ್ರೇಲಿಯನ್ ತನಿಖಾಧಿಕಾರಿಗಳು ದಾಳಿಯನ್ನ ಇಸ್ಲಾಮಿಕ್ ಸ್ಟೇಟ್ಸ್‌ ಗುಂಪಿನಿಂದ ಪ್ರೇರಿತವಾದ ಭಯೋತ್ಪಾದಕ ಕೃತ್ಯ ಎಂದು ಬಣ್ಣಿಸಿದ್ದಾರೆ.
ಈ ನಡುವೆ ಹತ್ಯೆಯಾದ ಸಾಜಿದ್‌ ಅಕ್ರಮ್ ಮೂಲತಃ ಭಾರತೀಯ ವ್ಯಕ್ತಿ ಅನ್ನೋದು ಬೆಳಕಿಗೆ ಬಂದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಸಾಜಿದ್‌ ಮೂಲತಃ ಹೃದರಾಬಾದ್‌ನವನಾಗಿದ್ದು, ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದನಂತೆ.
ವಲಸೆ ಹೋಗಿದ್ದರೂ ಆತ ಭಾರತದ ಪಾಸ್‌ಪೋರ್ಟ್‌ ಹೊಂದಿದ್ದ ಎನ್ನಲಾಗಿದೆ. ಹತ್ಯೆಯಾದ 50 ವರ್ಷದ ಸಾಜಿದ್‌ ಅಕ್ರಮ್ ಮೂಲತಃ ಹೈದರಾಬಾದ್‌ನವನು. 1998ರ ನವೆಂಬರ್‌ನಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದ. ಉದ್ಯೋಗ ಅರಸಿ ಭಾರತ ತೊರೆಯುವ ಮುನ್ನ ಹೈದರಾಬಾದ್‌ನಲ್ಲಿ ಬ್ಯಾಚುಲರ್ ಆಫ್ ಕಾಮರ್ಸ್ ಪದವಿ ಪೂರ್ಣಗೊಳಿಸಿದ್ದ ಎಂದು ತೆಲಂಗಾಣ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!