ಉದಯವಾಹಿನಿ, ಇಲಿನಾಯ್ಸ್: ತಂದೆಯನ್ನು ಕೊಲ್ಲುವುದು ನನ್ನ ಕರ್ತವ್ಯವಾಗಿತ್ತು. ನಾನು ಮಗುವಾಗಿದ್ದಾಗ ಅವರು ನನಗೆ ಶಿಕ್ಷೆ ನೀಡಿದ್ದರು… ಹೀಗೆ ಪೊಲೀಸರ ಮುಂದೆ ಭಾರತೀಯ ಮೂಲದ ವ್ಯಕ್ತಿಯೊಬ್ಬ ತಂದೆಯನ್ನು ಕೊಂದ ಬಳಿಕ ತಪ್ಪೊಪ್ಪಿಕೊಂಡ ಘಟನೆ ಅಮೆರಿಕದ ಇಲಿನಾಯ್ಸ್‌ನ ಶಾಂಬರ್ಗ್‌ನಲ್ಲಿ ನಡೆದಿದೆ. ಮಾನಸಿಕವಾಗಿ ಅಸ್ವಸ್ಥನಾಗಿದ್ದ ಮಗ ತಂದೆ ತನಗೆ ಬಾಲ್ಯದಲ್ಲಿ ಕಿರುಕುಳ ನೀಡಿದ್ದರು ಎಂದು ಹೇಳಿ ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. ಭಾರತೀಯ ಮೂಲದ ಅನುಪಮ್ ಪಟೇಲ್ (67) ಮೃತರು. ಅವರ ಮಗ ಅಭಿಜಿತ್ ಪಟೇಲ್ (28) ಕೊಲೆ ಮಾಡಿದ ಯುವಕ.
ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದ ಅಭಿಜಿತ್ ಪಟೇಲ್ ಪೊಲೀಸರು ಮನೆಗೆ ಬಂದ ತಕ್ಷಣ ಅವರಿಗೆ ಶರಣಾಗಿದ್ದು, ವಿಚಾರಣೆಯ ಸಮಯದಲ್ಲಿ ತಾನು ಮಗುವಾಗಿದ್ದಾಗ ತಂದೆ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಅವರನ್ನು ಕೊಂದಿದ್ದೇನೆ ಎಂದು ಹೇಳಿದ್ದಾನೆ.
ಥ್ಯಾಂಕ್ಸ್ ಗೀವಿಂಗ್ ವಾರಾಂತ್ಯದಲ್ಲಿ ಶಾಂಬರ್ಗ್‌ನಲ್ಲಿರುವ ಮನೆಯಲ್ಲಿ ಅಭಿಜಿತ್ ಪಟೇಲ್ ಅವರು ತಮ್ಮ ತಂದೆಯನ್ನು ಕೊಂಡಿದ್ದಾನೆ. ಈ ಘಟನೆ ನವೆಂಬರ್ 29ರಂದು ಬೆಳಗ್ಗೆ 11 ಗಂಟೆಗೆ ಸುಮಾರಿಗೆ ನಡೆದಿದೆ. ಅನುಪಮ್ ಪಟೇಲ್ ಅವರು ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.ನವೆಂಬರ್ 29ರಂದು ಅನುಪಮ್ ಪಟೇಲ್ ಅವರ ಪತ್ನಿ ಬೆಳಗ್ಗೆ 5.42 ರ ಸುಮಾರಿಗೆ ಕೆಲಸಕ್ಕೆ ಹೋಗಿದ್ದರು. ಅವರ ಪತಿ ಅನುಪಮ್ ಪಟೇಲ್ ಮತ್ತು ಮಗ ಅಭಿಜಿತ್ ಪಟೇಲ್ ಮನೆಯಲ್ಲಿದ್ದರು. ಮಧುಮೇಹದಿಂದ ಬಳಲುತ್ತಿದ್ದ ಅನುಪಮ್ ಅವರ ಗ್ಲೂಕೋಸ್ ಮಾನಿಟರ್ ಅವರ ಪತ್ನಿಯ ಫೋನ್‌ಗೆ ಸಂಪರ್ಕಗೊಂಡಿತ್ತು. ಬೆಳಗ್ಗೆ 8 ಗಂಟೆ ಅನುಪಮ್ ಅವರು ಪತ್ನಿಗೆ ಕೊನೆಯದಾಗಿ ಕರೆ ಮಾಡಿದ್ದರು. ಇದಾದ ಸ್ವಲ್ಪ ಹೊತ್ತಿನ ಬಳಿಕ ಪತಿಯ ರಕ್ತದಲ್ಲಿನ ಸಕ್ಕರೆ ಮಟ್ಟ ಕುಸಿಯುತ್ತಿರುವುದನ್ನು ನೋಡಿದ ಪತ್ನಿ ಮನೆಗೆ ಫೋನ್ ಮಾಡಿದ್ದಾರೆ. ಆದರೆ ಯಾರೂ ಫೋನ್ ಸ್ವೀಕರಿಸಲಿಲ್ಲ.
