ಉದಯವಾಹಿನಿ, ಮನಾಲಿ: ಸಾಮಾಜಿಕ ಮಾಧ್ಯಮದ ಯುಗದಲ್ಲಿ, ಅನೇಕ ವಿಡಿಯೊಗಳು ವೈರಲ್ ಆಗುತ್ತಿರುತ್ತವೆ. ಪ್ರಸ್ತುತ, ಹನಿಮೂನ್ ವಿಡಿಯೊವೊಂದ್ ಇಂಟರ್ನೆಟ್‌ನಲ್ಲಿ ಬಿರುಗಾಳಿಯನ್ನು ಎಬ್ಬಿಸುತ್ತಿದೆ. ದಂಪತಿಗಳು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ‘ಮನಾಲಿಯಲ್ಲಿ ಹನಿಮೂನ್ ರಾತ್ರಿ’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೊ ಹಂಚಿಕೊಂಡಿದ್ದರು. ಅದು ವ್ಯಾಪಕ ಮೆಚ್ಚುಗೆಯನ್ನು ಗಳಿಸಿದ್ದು, ಈಗಲು ಸಾಮಾಜಿಕ ಜಾಲತಾಣದಲ್ಲಿ(Viral Video) ಹರಿದಾಡುತ್ತಿದೆ.
ಸಾಮಾಜಿಕ ಮಾಧ್ಯಮದ ಯುಗದಲ್ಲಿ, ಅನೇಕ ವಿಡಿಯೊಗಳು ವೈರಲ್ ಆಗುತ್ತಿರುತ್ತವೆ. ಪ್ರಸ್ತುತ, ಹನಿಮೂನ್ ವಿಡಿಯೊವೊಂದ್ ಇಂಟರ್ನೆಟ್‌ನಲ್ಲಿ ಬಿರುಗಾಳಿಯನ್ನು ಎಬ್ಬಿಸುತ್ತಿದೆ. ದಂಪತಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ‘ಮನಾಲಿಯಲ್ಲಿ ಹನಿಮೂನ್ ರಾತ್ರಿ’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೊ ಹಂಚಿಕೊಂಡಿದ್ದರು. ಅದು ವ್ಯಾಪಕ ಮೆಚ್ಚುಗೆಯನ್ನು ಗಳಿಸಿದ್ದು, ಈಗಲು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ವಿಡಿಯೊ ಕಳೆದ ವರ್ಷ ರೆಕಾರ್ಡ್ ಮಾಡಲಾಗಿದ್ದರೂ, ಪ್ರಸ್ತುತ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಸುಂದರವಾದ ಮನಾಲಿ ಕಣಿವೆಗಳಲ್ಲಿರುವ ಕೋಣೆಯೊಂದರಲ್ಲಿ ಹೂವುಗಳಲ್ಲಿ ಬರೆದ ‘ಹ್ಯಾಪಿ ಹನಿಮೂನ್ ಲವ್’ ಎಂಬ ಪದಗಳಿಂದ ಹಾಸಿಗೆಯನ್ನು ಅಲಂಕರಿಸಲಾಗಿತ್ತು. ಸುತ್ತಲೂ ಗುಲಾಬಿಗಳನ್ನು ಹರಡಲಾಗಿತ್ತು. ಅವುಗಳ ಜೊತೆಗೆ ಒಂದು ಬಾಟಲಿ ಷಾಂಪೇನ್, ಎರಡು ಗ್ಲಾಸ್‌ ಮತ್ತು ಮೇಣದಬತ್ತಿಯನ್ನಿಡಲಾಗಿತ್ತು. ಇದು ನಿಜವಾಗಿಯೂ ರೊಮ್ಯಾಂಟಿಕ್‌ ವಾತಾವರಣವನ್ನು ಸೃಷ್ಟಿಸಿತು.

ಖುದ್ದು ತನ್ನ ಪತ್ನಿಗಾಗಿ ಪತಿ ಕೋಣೆಯನ್ನು ಈ ರೀತಿ ಅಲಂಕರಿಸಿದ್ದರು. ಇದು ಮಡದಿಗೆ ಬಹಳ ಸಂತೋಷ ತಂದಿತು. ಸ್ಮರಣೀಯವಾಗಿ ಆ ಸಂಜೆಯನ್ನು ಆಚರಿಸಿದ ದಂಪತಿ, ಸೋಫಾದ ಮೇಲೆ ಕೂತು ಕೇಕ್ ಕತ್ತರಿಸಿ, ಮೇಣದಬತ್ತಿಯ ಬೆಳಕಿನಲ್ಲಿ ಶಾಂಪೇನ್ ಅನ್ನು ತೆರೆಯುವ ಮೂಲಕ ರೊಮ್ಯಾಂಟಿಕ್‌ ರಾತ್ರಿಯನ್ನು ಆಚರಿಸಿದರು. ಈ ದಂಪತಿ ಹಲವಾರು ಫೋಟೋಗಳನ್ನು ತೆಗೆದುಕೊಂಡು ಸುಂದರವಾದ ವಿಡಿಯೊವನ್ನು ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. ಅಂದಿನಿಂದ ಇದು ಲಕ್ಷಾಂತರ ವ್ಯೂವ್ಸ್‌ ಗಳಿಸಿದೆ.

Leave a Reply

Your email address will not be published. Required fields are marked *

error: Content is protected !!